Department of Labor ಕಾರ್ಮಿಕ ಇಲಾಖೆಯು ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು-2024ರ ಅನುಷ್ಠಾನಗೊಳಿಸಲು 10 ಜನ ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಯ ಮಾಲೀಕರಿಗೆ ಜು-09 ರಂದು ಬೆಳಗ್ಗೆ 11.00 ಕ್ಕೆ ಛೇಂಬರ್ ಆಫ್ ಕಾಮರ್ಸ್, ಸಿಟಿಕ್ಲಬ್ ಹಿಂಭಾಗ, ಶಿವಮೊಗ್ಗ ಇಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ.
Department of Labor ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹೊಟೇಲ್ ಮಾಲೀಕರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಮುಖ್ಯಸ್ಥರು, ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಬಾರ್ ಮತ್ತು ರೆಸ್ಟೋರಂಟ್ ಮಾಲೀಕರು, ಖಾಸಗಿ ಸಾರಿಗೆಗಳ ಮುಖ್ಯಸ್ಥರು ಹಾಗೂ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು ಈ ಸಭೆಗೆ ಹಾಜರಾಗುವಂತೆ ಕಾರ್ಮಿಕ ಅಧಿಕಾರಿಗಳು ತಿಳಿಸಿರುತ್ತಾರೆ.
Department of Labor ಕಾರ್ಮಿಕರ ನೇಮಾಕಾತಿ ಪ್ರಕ್ರಿಯೆ, ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಸಂಸ್ಥೆಗಳ ಮಾಲೀಕರಿಗೆ”ಅರಿವು” ಕಾರ್ಯಕ್ರಮ
Date:
