Sunday, August 2, 2026
Sunday, August 2, 2026

Sringeri Sharada Peetham ಶೃಂಗೇರಿ ಭಾರೀಮಳೆಗೆ ತುಂಗಾತಟದ ಕಪ್ಪೆ ಶಂಕರ ಸೋಪಾನ ಮುಳುಗಿದೆ

Date:

Sringeri Sharada Peetham ಇತಿಹಾಸ ಪ್ರಸಿದ್ದ ಶೃಂಗೇರಿ ತುಂಗಾ ತಟದಲ್ಲಿರುವ ಕಪ್ಪೆಶಂಕರ ನಗರದ ಕುರಬಗೇರಿ ಗಾಂಧಿ ಮೈದಾನ ಸಂಪರ್ಕಿಸುವ ಒನ್ -ವೇ ರಸ್ತೆ ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ. ರಾತ್ರಿಯಿಡೀ ಎಡಬಿಡದೇ ಸುರಿದ ಭಾರೀ ಮಳೆಗೆ ಶಾರದಾ ಪೀಠ ಶೃಂಗೇರಿಯ ತುಂಗಾ ತಟದಲ್ಲಿರುವ ಕಪ್ಪೆ ಶಂಕರ ಸಂಪೂರ್ಣ ಮುಳುಗಡೆಯಾಗಿದೆ.
ಇಲ್ಲಿನ ಕುರುಬಗೇರಿಯಿಂದ ಗಾಂಧಿ ಮೈದಾನ, ಶ್ರೀಮಠಕ್ಕೆ ಸಂಪರ್ಕ ಕಲ್ಪಿಸುವ ಗೌರಿಶಂಕರ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಆ ಮೂಲಕ ಇದ್ದ ಸಂಚಾರ ಸ್ಥಗಿತಗೊಂಡಿದೆ. ಭಾರೀ ಮಳೆಯ ಮುನ್ಸೂಚನೆಯಿಂದ ಜಾಗೃತರಾಗಿದ್ದ ಶೃಂಗೇರಿ ಪೋಲೀಸರು ನದಿ Sringeri Sharada Peetham ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದರು ಹಾಗೂ ಅಪಾಯದ ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರಾತ್ರಿಯಿಂದಲೇ ಸಂಚಾರ ಸ್ಥಗಿತಗೊಳಿಸಲಾಗಿತ್ತು
ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆ ತುಂಗೆಯ ನೀರಿನ ಮಟ್ಟ ಏರುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...