Sunday, August 23, 2026
Sunday, August 23, 2026

Agumbe Ghat accident ನಿಂತಿದ್ದ ಟಿಪ್ಪರ್ ಗೆ ಟ್ರಕ್ ಡಿಕ್ಕಿ. ಸ್ಥಳದಲ್ಲೇ ಓರ್ವನ ಮರಣ

Date:

Agumbe Ghat accident ಆಗುಂಬೆ ಸಮೀಪ ಇವತ್ತು ಅಪಘಾತವೊಂದು ಸಂಭವಿಸಿದೆ. ಆಗುಂಬೆ ಹೋಟೆಲ್‌ವೊಂದರ ಬಳಿ ನಿಂತಿದ್ದ ಟಿಪ್ಪರ್‌ಗೆ ಟ್ರಕ್‌ವೊಂದು ಗುದ್ದಿದೆ. ಘಟನೆಯಲ್ಲಿ ಟ್ರಕ್‌ನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.
ಹೆಬ್ರಿಯಿಂದ ಮೊಟ್ಟೆ ತುಂಬಿಕೊಂಡು ಟ್ರಕ್‌ವೊಂದು ಆಗುಂಬೆ ಘಟ್ಟ ಹತ್ತಿಕೊಂಡು ಮೇಲೆಕ್ಕೆ ಬಂದಿತ್ತು ಆಗುಂಬೆ ಚೆಕ್‌ ಪೋಸ್ಟ್‌ ದಾಟಿ ಬಂದ ಟ್ರಕ್‌, ಅಲ್ಲಿಯೆ ಹೋಟೆಲ್‌ ವೊಂದರ ಬಳಿ ಸೈಡ್‌ಗೆ ಹಾಕಿದ್ದ ಟಿಪ್ಪರ್‌ವೊಂದಕ್ಕ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಸಂದರ್ಭದಲ್ಲಿ ಟ್ರಕ್‌ ಸ್ಪೀಡ್‌ ಆಗಿತ್ತು ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಡಿಕ್ಕಿಯಾದ ರಭಸಕ್ಕೆ ಟ್ರಕ್‌ನ ಮುಂಭಾಗ ಪೂರ್ತಿ ಜಖಂ ಆಗಿದೆ.
Agumbe Ghat accident ಟ್ರಕ್‌ನಲ್ಲಿ ಇಬ್ಬರು ಚಾಲಕರಿದ್ದು ಓರ್ವ ದೊಡ್ಡಮನೆ ಕೇರಿಯ ಸಲ್ಮಾನ್‌ ಎಂದು ಗುರುತಿಸಲಾಗಿದೆ. ಆತ ಇನ್ನೊಬ್ಬನಿಗೆ ಡ್ರೈವಿಂಗ್‌ ಮಾಡಲು ಅವಕಾಶ ಕೊಟ್ಟು ಅಲ್ಲಿಯೇ ಮಲಗಿದ್ದ. ಇನ್ನೊಬ್ಬ ಡ್ರೈವರ್‌ ವಾಹನ ಚಲಾಯಿಸಿಕೊಂಡು ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಸಲ್ಮಾನ್‌ ‍ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಇನ್ನೊಬ್ಬನ ಸ್ಥಿತಿಯು ಗಂಭೀರವಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆ ಮಣಿಪಾಲ್‌ಗೆ ಕರೆದೊಯ್ಯಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...