Saturday, December 6, 2025
Saturday, December 6, 2025

Klive Special Article ನಾನು ನೋಡಿದ ಹಿರೇ ಭಾಸ್ಕರ ಡ್ಯಾಂ ಲೇ: ತುಳಸೀರಾಂ ಮೈಸೂರು

Date:

Klive Special Article ಒಮ್ಮೆ ಸರ್ ಎಂ ವಿಶ್ವೇಶ್ವರಯ್ಯ ನವರು ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ನ್ನು ನೋಡಿ ” WHAT A WASTE OF WATER” ಎಂದು ಉದ್ಗರಿಸಿದ್ದರು. ನಂತರ 1939 ರಲ್ಲಿ ಸಾಗರ ತಾಲೂಕಿನ ಮಡೆನೂರು- ಹಿರೇಭಾಸ್ಕರದಲ್ಲಿ ಶರಾವತಿ ನದಿಗೆ ಅಣೆಕಟ್ಟು ಕಟ್ಟಲು ಪ್ರಾರಂಭಿಸಿ 1948 ರಲ್ಲಿ ಪೂರ್ಣಗೊಳಿಸಿ – ಜೋಗ್ ಫಾಲ್ಸ್ ನಲ್ಲಿ ” ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಸುಮಾರು 120 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ನಾಡಿಗೆ ಬೆಳಕು ನೀಡಲು ಪ್ರಾರಂಭವಾಯಿತು.

1964ರಲ್ಲಿ ಪುನಹ ಶರಾವತಿ ವಿದ್ಯುತ್ಗಾರದಲ್ಲಿ ಸುಮಾರು 1035 ಮೆಗಾವಾಟ್ಷ್ ವಿದ್ಯುತ್ ಉತ್ಪಾದಿಸಲು ಬೃಹತ್ ಅಣೆಕಟ್ಟನ್ನು ಲಿಂಗನಮಕ್ಕಿ ಯಲ್ಲಿ ನಿರ್ಮಿಸಿದ ನಂತರ ಈ ಅಣೆಕಟ್ಟು ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆ ಗೊಂಡಿತು.

Klive Special Article ಹಿರೆಭಾಸ್ಕರ ಡ್ಯಾಮ್ ನ್ನು ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ನಾಲ್ವಡಿ ಕೃಷ್ಣ ರಾಜಒಡೆಯರ್ ಅಸ್ತಿಭಾರ ಹಾಕಿ ನಿರ್ಮಿಸಿದ್ದ ಈ ಅಣೆಕಟ್ಟು ಕೇವಲ ಗಾರೆ ಸುಣ್ಣ ದಿಂದ ನಿರ್ಮಿಸಲಾಗಿದ್ದರೂ ಸಹ 80 ವರ್ಷಗಳ ನಂತರವೂ ಸದೃಢ ವಾಗಿದ್ದು ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿ ಮೆಯಾದಾಗ ಗೋಚರವಾಗುತ್ತದೆ. ಸೈಫನ್ ತತ್ವಧಾರಿತ ಈ ಡ್ಯಾಮ್ ನೋಡಲು ಬಹು ಸುಂದರ. ಚರಿ ತ್ರಾರ್ಹ ಅಣೆಕಟ್ಟು – ಕರ್ಣಾಟಕಕ್ಕೆ ಬೆಳಕು ನೀಡಿದ ಈ ಅಣೆಕಟ್ಟನ್ನು ವಿಕ್ಷಿಸುವುದೇ ಒಂದು ರೋಮಾಂಚ ಕಾರಿ ಅನುಭವ.

ಕಳೆದ ವರ್ಷ ವೀಕ್ಷಕರ ದಟ್ಟಣೆ ಹೆಚ್ಚಾದ್ದರಿಂದ ಅರಣ್ಯ ಇಲಾಖೆ ನಿರ್ಭಂಧ ಹೇರಿತ್ತು. ಮೇ ತಿಂಗಳ ಮಧ್ಯಭಾಗ ನೋಡಲು ಪ್ರಸಕ್ತ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...