Thursday, September 17, 2026
Thursday, September 17, 2026

Mandya Police ನೀರಿನಲ್ಲಿ ವಿಷ ಬೆರೆಸಿ ಪತ್ನಿ,ಮಕ್ಕಳನ್ನ ಕೊಂದ ಪಾಪಿ ತಂದೆ

Date:

Mandya Police ಕೌಟುಂಬಿಕ ಕಲಹದಿಂದ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕುಡಿಯುವ ನೀರಿನಲ್ಲಿ ವಿಷ ಬೆರಸಿ ಹತ್ಯೆ ಮಾಡಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.

ಹೆಂಡತಿ ಮೇಲಿನ ಸಿಟ್ಟಿನಿಂದ ಪತಿ ನರಸಿಂಹ ನೀರಿನಲ್ಲಿ ವಿಷಬೆರೆಸಿ ಅದನ್ನು ಪತ್ನಿ ಮಕ್ಕಳಿಗೆ ಕುಡಿಸಿ ಕೊಂದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ಮೃತರನ್ನು 23 ವರ್ಷದ ಪತ್ನಿ ಕೀರ್ತನಾ, ಮಕ್ಕಳಾದ ಜಯಸಿಂಹ (4), ರಿಷಿಕಾ(1) ಸಾವನ್ನಪ್ಪಿದ್ದಾರೆ.

Mandya Police ಐದು ವರ್ಷಗಳ ಹಿಂದೆ ನರಸಿಂಹ ಹಾಗೂ ಕೀರ್ತನಾ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದರು. ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದ ನರಸಿಂಹ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಹೆಂಡತಿ ಆರೋಪಿಸಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಇದರಿಂದ ಆಕ್ರೋಶಗೊಂಡ ನರಸಿಂಹ ಪತ್ನಿ ಮತ್ತು ಮಕ್ಕಳ ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ. ಪತ್ನಿ ಮತ್ತು ಮಕ್ಕಳಿಗೆ ವಿಷ ಬೆರಸಿದ ನೀರು ಕುಡಿಸಿ ಸಾಯಿಸಿದ ಬಳಿಕ ನರಸಿಂಹನೂ ಅದೇ ನೀರು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...