Thursday, September 17, 2026
Thursday, September 17, 2026

B.Y.Raghavendra ಶಿವಮೊಗ್ಗ ಸಂಸದ ರಾಘವೇಂದ್ರ ಅವರ ಆಸ್ತಿ ಎಷ್ಟಿದೆ? ಮಾಹಿತಿ ಓದಿ

Date:

B.Y.Raghavendra ನಾಮಪತ್ರ ಸಲ್ಲಿಸಿದ ಬಿ. ವೈ. ರಾಘವೇಂದ್ರ ಅವರ ಆಸ್ತಿ ವಿವರಗಳನ್ನು ಗಮನಿಸುವುದಾದರೆ, ಅವರು ಒಟ್ಟಾರೆ ಒಟ್ಟು 73.71 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
ರಾಘವೇಂದ್ರ ಬಳಿ 55.85 ಕೋಟಿ ರೂಪಾಯಿ ಆಸ್ತಿ ಇದೆ.

ಪತ್ನಿ ತೇಜಸ್ವಿನಿ ಹೆಸರಿನಲ್ಲಿ 17.86 ಕೋಟಿ ರೂಪಾಯಿ ಆಸ್ತಿಯಿದೆ.

ರಾಘವೇಂದ್ರ ಕೈಯಲ್ಲಿ 33,291 ರೂಪಾಯಿ ಕ್ಯಾಶ್‌ ಇದ್ದು, ಅವರ ಪತ್ನಿ ತೇಜಸ್ವಿನಿ ಬಳಿ 9,39,109 ರೂಪಾಯಿ ಹಣವಿದೆ. ಇನ್ನೂ ರಾಘವೇಂದ್ರ ವಿವಿಧ ಬ್ಯಾಂಕ್‌ಗಳಲ್ಲಿ 13 ಅಕೌಂಟ್ ಹೊಂದಿದ್ದಾರೆ . ಅಲ್ಲಿ ಒಟ್ಟಾರೆ 98,01,123 ರೂಪಾಯಿ ಡಿಪಾಸಿಟ್‌ ಆಗಿದೆ. ಇನ್ನೂ ಪತ್ನಿ ತೇಜಸ್ವಿನಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 8 ಅಕೌಂಟ್‌ಗಳಿದ್ದು 25,65,577 ರೂಪಾಯಿ ಹಣವಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ರಾಘವೇಂದ್ರ 15 ಕಂಪನಿಗಳಲ್ಲಿ 7.68 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ತೇಜಸ್ವಿನಿ ಆರು ಕಂಪನಿಗಳಲ್ಲಿ 1.22 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಮ್ಯೂಚುವಲ್ ಫಂಡ್ಸ್ ಹಾಗೂ ವಿವಿಧ ಬಾಂಡ್‌ಗಳಲ್ಲಿ ರಾಘವೇಂದ್ರರವರು 2.22 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ತೇಜಸ್ವಿನಿಯವರು 30 ಸಾವಿರ ರೂಪಾಯಿ ಹೂಡಿಕೆಮಾಡಿದ್ದಾರೆ.

ರಾಘವೇಂದ್ರ ತಮ್ಮ ಪತ್ನಿ ತೇಜಸ್ವಿನಿ, ಮಕ್ಕಳಾದ ಭಗತ್, ಸುಭಾಷ್ ಮತ್ತು ತಮ್ಮ ಸಹೋದರ ವಿಜಯೇಂದ್ರಗೆ ಸಾಲ ನೀಡಿದ್ದಾರೆ. ವಿಜಯೇಂದ್ರಗೆ 85 ಲಕ್ಷ ರೂಪಾಯಿ, ಪತ್ನಿ ತೇಜಸ್ವಿನಿಗೆ 5.49 ಕೋಟಿ ರೂಪಾಯಿ, ಪುತ್ರ ಭಗತ್‌ಗೆ 65 ಲಕ್ಷ ರೂಪಾಯಿ, ಮತ್ತೊಬ್ಬ ಪುತ್ರ ಸುಭಾಷ್‌ಗೆ 85 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ.

B.Y.Raghavendra ವಿವಿಧ ಸಂಸ್ಥೆಗಳಿಗೆ ರಾಘವೇಂದ್ರರವರು 20.39 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ಇನ್ನೂ ರಾಘವೇಂದ್ರಗೆ 69.39 ಲಕ್ಷ ರೂಪಾಯಿ ಸಾಲವಿದೆ. ಪತ್ನಿ ತೇಜಸ್ವಿನಿಗೆ 12.91 ಕೋಟಿ ರೂಪಾಯಿ ಸಾಲವಿದೆ. ಚಿನ್ನ, ವಜ್ರ, ಬೆಳ್ಳಿ, ವಾಹನಗಳು 1988 ಮಾಡಲ್‌ನ ಅಂಬಾಸಿಡರ್, ಒಂದು ಟ್ರಾಕ್ಟರ್, ಟೊಯೊಟ ಫಾರ್ಚುನರ್ ಕಾರು ರಾಘವೇಂದ್ರ ಹೆಸರಲ್ಲಿದೆ.

ಇವುಗಳ ಒಟ್ಟು ಮೌಲ್ಯ 44.77 ಲಕ್ಷ ರೂಪಾಯಿ ಇದೆ. ರಾಘವೇಂದ್ರ ಬಳಿ 1021.50 ಗ್ರಾಂ ಚಿನ್ನವಿದೆ. 114.26 ಕ್ಯಾರೆಟ್ ವಜ್ರ, 8.6 ಕೆ.ಜಿ ಬೆಳ್ಳಿ, 42 ಬೆಲೆಬಾಳುವ ಹರಳು ಇದೆ. ಪತ್ನಿ ತೇಜಸ್ವಿನಿ ಬಳಿ 1395.92 ಗ್ರಾಂ ಚಿನ್ನ, 96.022 ಕ್ಯಾರೆಟ್ ವಜ್ರ, 5.1 ಕೆ.ಜಿ ಬೆಳ್ಳಿ ಇದೆ.

ರಾಘವೇಂದ್ರ ಹೆಸರಿನಲ್ಲಿ 11.33 ಎಕರೆ ಕೃಷಿ ಜಮೀನು ಇದೆ. ವಿವಿಧೆಡೆ 18 ಕೋಟಿ ರೂಪಾಯಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಿನಲ್ಲಿ 8.07 ಕೋಟಿ ರೂಪಾಯಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ರಾಘವೇಂದ್ರ ಹೆಸರಿನಲ್ಲಿ 1.24 ಕೋಟಿ ರೂಪಾಯಿ ಮೌಲ್ಯದ ಕಟ್ಟಡಗಳಿವೆ.

ರಾಘವೇಂದ್ರ ಹೆಸರಿನಲ್ಲಿ ಶಿವಮೊಗ್ಗದ ವಿನೋಬನಗರ, ಶಿಕಾರಿಪುರದಲ್ಲಿ ವಾಸದ ಮನೆಗಳಿವೆ. ಪತ್ನಿ ತೇಜಸ್ವಿನಿ 6.82 ಕೋಟಿ ರೂಪಾಯಿ ಮೌಲ್ಯದ ವಾಸದ ಮನೆಗಳಿವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...