Sunday, September 27, 2026
Sunday, September 27, 2026

Rameswaram Cafe ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ತೀರ್ಥಹಳ್ಳಿಯಲ್ಲಿ ಪ್ರಮುಖ ಆರೋಪಿಯ ಬಂಧನ

Date:

Rameswaram Cafe ರಾಮೇಶ್ವರಂ ಕಫೆ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ ಮತ್ತೊಂದು ಬಿಗ್‌ ಮೂವ್‌ ತೋರಿದೆ. ಪ್ರಕರಣದಲ್ಲಿ ಟೆಕ್ನಿಲ್‌ ಎವಿಡೆನ್ಸ್‌ ಹಾಗೂ ರಿವರ್ಸ್‌ ಇನ್ವೆಸ್ಟಿಗೇಷನ್‌ ನಲ್ಲಿ ತೊಡಗಿರುವ ಎನ್‌ಐಎ ಪ್ರಕರಣ ಸಂಬಂಧ ಎ ಒನ್‌ ಆರೋಪಿಯನ್ನು ಅರೆಸ್ಟ್‌ ಮಾಡಿದೆ. ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಕೇಸ್‌ ಅಡಿಯಲ್ಲಿ ವಿಚಾರಣಾಧೀನ ಕೈದಿಯಾಗಿರುವ ತೀರ್ಥಹಳ್ಳಿ ಮಾಜ್‌ ಮುನೀರ್‌ ಇಡೀ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
ಈ ಹಿಂದೆ ರಾಮೇಶ್ವರಂ ಕಫೆ ಸ್ಫೋಟ ಸಂಬಂಧ NIA ಮಾಜ್‌ ಮುನೀರ್‌ನನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಅದರ ಬೆನ್ನಲ್ಲೆ ಎನ್‌ಐಎಗೆ ಕಫೆ ಸ್ಫೋಟದ ಆರೋಪಿಗಳು ತೀರ್ಥಹಳ್ಳಿಯ ಶರೀಫ್‌ ಎಂಬುದು ಗೊತ್ತಾಗಿತ್ತು. ಶಿವಮೊಗ್ಗ ಪೊಲೀಸರ ಸಹಾಯದಿಂದ ಈ ಬಗ್ಗೆ ಮಾಹಿತಿ ಪಡೆದ ಎನ್‌ಐಎ ಟೆಕ್ನಿಕಲ್‌ ಎವಿಡೆನ್ಸ್‌ ಅಡಿಯಲ್ಲಿ ರಾಜ್ಯದ 18 ಕಡೆಗಳಲ್ಲಿ ರೇಡ್‌ ನಡೆಸಿತ್ತು. ತೀರ್ಥಹಳ್ಳಿಯಲ್ಲಿಯು ಈ ಸಂಬಂಧ ದಾಳಿ ನಡೆದಿತ್ತು.
Rameswaram Cafe ಮುಜಾಮಿಲ್‌ ಎಂಬಾತನನ್ನ ಎನ್‌ಐಎ ಲಿಫ್ಟ್‌ ಮಾಡಿತ್ತು. ಆತನು ಇಡೀ ಪ್ರಕರಣಕ್ಕೆ ದೊಡ್ಡ ಬ್ರೇಕ್‌ ಥ್ರೂ ನೀಡಿದ್ದಾನೆ. ಆತನ ಮೂಲಕ ಪ್ರಕರಣದ ಬಹುಮುಖ್ಯ ಕಲೆಹಾಕಿದ್ದ ಎನ್‌ಐಎ ತೀರ್ಥಹ‍ಳ್ಳಿಯಲ್ಲಿ ಮತ್ತೆ ಮೂವರನ್ನ ತನ್ನ ವಿಚಾರಣೆಗೆ ಗೌಪ್ಯವಾಗಿ ಕರೆದುಕೊಂಡು ಹೋಗಿತ್ತು. ಇದರಲ್ಲಿದ್ದ ಬಿಜೆಪಿ ಕಾರ್ಯಕರ್ತ ಎನ್‌ಐಎ ವಿಚಾರಣೆ ಮುಗಿಸಿ ಹೊರಕ್ಕೆ ಬಂದು ತಮ್ಮ ಐಡಿ ಮಿಸ್‌ ಯೂಸ್‌ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು.
ಇವೆಲ್ಲದರ ನಡುವೆ ಎನ್‌ಐಎ ಮಾಜ್‌ ಮುನೀರ್‌ನನ್ನ ಅರೆಸ್ಟ್‌ ಎಂದು ತೋರಿಸಿದ್ದು, ಆತನನ್ನೆ ಏ ಒನ್‌ ಆರೋಪಿಯನ್ನಾಗಿಸಿದೆ. ಮತೀನ್‌ ಹಾಗೂ ಶರೀಫ್‌ ಎ 2 ಮತ್ತು ಎ 3 ಆರೋಪಿಗಳು. ನಾಲ್ಕನೇ ಆರೋಪಿ ಮುಜಾಮಿಲ್‌ ಆಗಿದ್ದಾನೆ. ಇವರಷ್ಟೆ ಅಲ್ಲದೆ ಇನ್ನಷ್ಟು ಮಂದಿಯನ್ನ ಎನ್‌ಐಎ ವಿಚಾರಣೆ ನಡೆಸ್ತಿದ್ದು, ಶೀ‍ಘ್ರದಲ್ಲಿಯೇ ಇಡೀ ಕೇಸ್‌ನ ಮೂಲ ಹುಡುಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...