Sunday, November 24, 2024
Sunday, November 24, 2024

Klive Special Article ಅಪರಾಧಿತನವನ್ನ ಮೂಲದಲ್ಲೇ ಗುರುತಿಸಿ ಶಿಕ್ಷಿಸಬೇಕು ಲೇ: ಎಚ್.ಕೆ.ವಿವೇಕಾನಂದ.

Date:

Klive Special Article ಈ ವಿಷಯ ಸ್ವಲ್ಪ ವಿಚಿತ್ರವಾದರು ಇದರಲ್ಲಿರುವ ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ……

ಚುನಾವಣೆಗಳಲ್ಲಿ ಮತ ಹಾಕಲು ಹಣ ಪಡೆಯುವವರಿಗೆ ಬೇಡ ಎಂದು ಹೇಳುವುದಕ್ಕಿಂತ ಅತಿ ಹೆಚ್ಚಿನ ಮಹತ್ವ ಹಣ ನೀಡುವ ಖದೀಮರಿಗೆ ಕಠಿಣ ಶಿಕ್ಷೆ ನೀಡಲು ಅಥವಾ ಅವರ ಮನಃಪರಿವರ್ತನೆಗೆ ನೀಡಬೇಕು……

ಲಂಚ ನೀಡುವ ಸಾಮಾನ್ಯ ಜನರಿಗೆ ನೀಡಬೇಡಿ ಎಂದು ಹೇಳುವುದಕ್ಕಿಂತ ಅದನ್ನು ಪಡೆಯುವ ಭ್ರಷ್ಟರಿಗೆ ಬಹಿಷ್ಕಾರ ಹಾಕಬೇಕು…….

ಕೆಟ್ಟ ಕಾರ್ಯಕ್ರಮ ನೋಡಬೇಡಿ ಎಂದು ವೀಕ್ಷಕರಿಗೆ ಹೇಳುವುದಕ್ಕಿಂತ ಆ ರೀತಿಯ ಕೆಟ್ಟ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡುವ ಚಾನಲ್ ಗಳಿಗೆ ಎಚ್ಚರಿಕೆ ಕೊಟ್ಟು ದಂಡ ವಿಧಿಸಬೇಕು……

ಮೌಡ್ಯವನ್ನು ನಂಬಿ ಜ್ಯೋತಿಷಿಗಳ ಮಾತು ಕೇಳುವ ಜನರಿಗೆ ಬುದ್ಧಿ ಹೇಳುವುದಕ್ಕಿಂತ ಜ್ಯೋತಿಷಿಗಳಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಯತ್ನಿಸಬೇಕು ಅಥವಾ ಅವರನ್ನು ಹೊರಹಾಕಬೇಕು……

ಕಲಬೆರಕೆ, ಮೋಸ, ವಂಚನೆಗೆ ಒಳಗಾಗುವ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಿಂತ ಅದನ್ನು ಮಾಡುವ ದುರುಳರನ್ನು ನಿಯಂತ್ರಿಸಲು ಆಸಕ್ತಿ ವಹಿಸಬೇಕು…….

Klive Special Article ಏಕೆಂದರೆ ನಮ್ಮ ದೇಶದ ಜನಸಂಖ್ಯೆ 141 ಕೋಟಿಗೂ ಹೆಚ್ಚು. ಇಷ್ಟೊಂದು ಬೃಹತ್ ಮತ್ತು ವೈವಿಧ್ಯಮಯ ಜನರಿಗೆ ಸತ್ಯದ ನೆಲೆಯಲ್ಲಿ ವಾಸ್ತವಾಂಶ ತಿಳಿಸಿ ಬದಲಾಯಿಸುವುದು ಎಂತಹ ಮಹಾತ್ಮನಿಗೂ ಸಾಧ್ಯವಿಲ್ಲ. ಅದಕ್ಕೆ ಬದಲು ಹಣ ಹಂಚುವ, ಲಂಚ ಪಡೆಯುವ, ಮೌಡ್ಯ ಬಿತ್ತುವ, ಕೆಟ್ಟ ಕಾರ್ಯಕ್ರಮ ರೂಪಿಸುವ, ಕಲಬೆರಕೆ ಮಾಡುವ ಜನರ ಸಂಖ್ಯೆ ಕಡಿಮೆ ಇದೆ. ಅವರನ್ನೇ ಗುರಿಯಾಗಿಸಿ ದಕ್ಷ ಕಾರ್ಯಪಡೆ ರಚಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಂಡು ಬಯಲು ಜೈಲುಗಳನ್ನು ನಿರ್ಮಿಸಿ ಅಲ್ಲಿ ಅವರನ್ನು ಹಾಕಿ ಅಲ್ಲಿಂದಲೇ ಅವರಿಂದ ದುಡಿಸಿಕೊಂಡು ಅವರ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಬೇಕು…….

ಅದುಬಿಟ್ಟು ಜನ ಸರಿಯಿಲ್ಲ ಎಂಬುದನ್ನೇ ನೆಪವಾಗಿಟ್ಟುಕೊಂಡು ತಮ್ಮ ಅನೈತಿಕ ದಂಧೆಗಳನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬಾರದು. ಇಷ್ಟೊಂದು ದೊಡ್ಡ ಗಾತ್ರದ, ಅಭಿವ್ಯಕ್ತಿ ಸ್ವಾತಂತ್ರ್ಯವಿರುವ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಾನ ಮನಸ್ಸುಗಳ ಒಗ್ಗಟ್ಟು ಪ್ರದರ್ಶಿಸುವುದು ಸಾಧ್ಯವಿಲ್ಲದ ಮಾತು……

ಸಂಪೂರ್ಣ ಅಧಿಕಾರ ಹೊಂದಿದ ಒಂದು ಒಳ್ಳೆಯ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಮ್ಮೆಲ್ಲರ ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಅಂತರಂಗದ ಚಳವಳಿ ರೂಪಿಸಿಕೊಂಡು ಕ್ರಾಂತಿಕಾರಕ ಬದಲಾವಣೆಯ ಮುಖಾಂತರ ಅತ್ಯುತ್ತಮ ಸರ್ಕಾರ ರಚಿಸಿದರೆ ಇದು ಸುಲಭವಾಗುತ್ತದೆ. ನಮ್ಮ ಗಮನ ಆ ಕಡೆಯೇ ಹೆಚ್ಚು ಕೇಂದ್ರೀಕರಿಸಬೇಕಿದೆ. ಸಣ್ಣ ಪುಟ್ಟ ಬದಲಾವಣೆಗಳಿಂದ ವ್ಯವಸ್ಥೆಯ ಬದಲಾವಣೆ ಸಾಧ್ಯವಿಲ್ಲ. ಅದಕ್ಕಾಗಿ ನಿಮ್ಮೊಂದಿಗೆ ……………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ. 9844013068……..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyanka Gandhi ಕೇರಳ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅತ್ಯಧಿಕ ಮತಗಳಿಂದ ಆಯ್ಕೆ

Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ,...

SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್

SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ

Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ...

Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್

Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್...