Department of Forest ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಬಳೆ ಗ್ರಾಮದಲ್ಲಿ ನೂತನವಾಗಿ ಪಶು ಚಿಕಿತ್ಸಾಲಯ ಆರಂಭಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪ್ರೇಮಾ ಕೆ.ವಿ.ಮಂಜುನಾಥ್ ಹೇಳಿದ್ದಾರೆ.
ಈ ಕುರಿತು ತಿಳಿಸಿರುವ ಅವರು ಗ್ರಾಮಗಳ ಹಸು, ಎಮ್ಮೆ,ಹೋರಿ ಸೇರಿದಂತೆ ಇನ್ನಿ ತರೆ ಜಾನುವಾರುಗಳಿಗೆ ಚಿಕಿತ್ಸಾಲಯ ಸ್ಥಾಪಿಸುವ ಬಗ್ಗೆ ಹಲವಾರು ವರ್ಷಗಳ ಬೇಡಿಕೆಗೆ ಅನುಗುಣವಾಗಿ ಶಾಸ ಕಿ ನಯನ ಮೋಟಮ್ಮನವರು ಸ್ಪಂದಿಸಿ ಗ್ರಾಮದಲ್ಲಿ ಫೆ.11 ರಂದು ನೂತನ ಪಶು ಚಿಕಿತ್ಸಾಲಯ ಆರಂಭಿಸಲು ಮುಂದಾಗಿರುವುದು ಸಂತಸದ ವಿಷಯ ಎಂದಿದ್ದಾರೆ.
ಇತ್ತೀಚೆಗೆ ಚಿಕ್ಕಮಗಳೂರಿನ ಅಂಬಳೆ ಗ್ರಾಮದ ಸುತ್ತಮುತ್ತಲಿನ ರಾಸುಗಳಿಗೆ ಹಾಲುಜ್ವರ, ಕೆಚ್ಚಲುಬಾಯಿ ಸೇರಿದಂತೆ ರೋಗ ಲಕ್ಷಣಗಳು ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಇದನ್ನರಿತು ಶಾಸಕರ ಗಮನಕ್ಕೆ ತಂದ ಮೇರೆಗೆ ಚಿಕಿತ್ಸಾಲಯ ಸ್ಥಾಪಿಸುತ್ತಿದ್ದು ಅಂಬಳೆ ಸೇರಿದಂತೆ ಸುತ್ತಮುತ್ತಲಿನ ರೈತರು ಅನು ಕೂಲ ವಾಗಲಿದೆ ಎಂದರು.
Department of Forest ಅಂಬಳೆ ಸೇರಿದಂತೆ ಸುತ್ತಮುತ್ತಲು ಸಾವಿರಾರುಗಳು ಜಾನುವಾರುಗಳಿಗೆ ಸಣ್ಣಪುಟ್ಟ ಔಷಧಿ ಪಡೆಯಲಿಕ್ಕೆ ಚಿಕಿತ್ಸಾ ಕೇಂದ್ರಗಳಿರಲಿಲ್ಲ. ಈ ಸಂಬಂಧವಾಗಿ ರೈತರಿಗೆ ಬಹಳಷ್ಟು ಸಮಸ್ಯೆಯಾಗಿತ್ತು. ಆ ನಿಟ್ಟಿನಲ್ಲಿ ಸ್ಥಳೀಯ ಗ್ರಾ. ಪಂ., ತಾ.ಪಂ. ಸದಸ್ಯರುಗಳ ಒತ್ತಾಯದ ಮೇರೆಗೆ ಶಾಸಕರು ಸ್ಪಂದಿಸುವ ಮೂಲಕ ನೂತನ ಚಿಕಿತ್ಸಾಲಯಕ್ಕೆ ಚಾಲನೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.