Wednesday, August 12, 2026
Wednesday, August 12, 2026

Agri News ಕಬ್ಬಿಗೆ ಹೆಚ್ಚುವರಿ ₹100 ಬಾಕಿ ನೀಡದಿದ್ದರೆ ಲೋಕಾಸಭಾ ಚುನಾವಣೆ ಬಹಿಷ್ಕಾರ- ಎಚ್.ಎನ್.ದೇವಕುಮಾರ್

Date:

Agri News ಎಂಪಿಎಂ ಕಾರ್ಖಾನೆಗೆ2010-11 ಸಾಲಿನಲ್ಲಿ ಸರಬರಾಜು ಮಾಡಿದ ಕಬ್ಬಿನ ಬಾಕಿ ೧೦೦ ಸರಕಾರ ಕೊಡದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕಲಾಗುವುದೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕಬ್ಬು ಬೆಳೆಗಾರರ ಸಂಘದ ಸಂಚಾಲಕ ಹೆಚ್.ಎನ್.ದೇವಕುಮಾರ್ ಹೇಳಿದರು.


ಅವರು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ರೈತರು ಬೆವರು ಸುರಿಸಿ ಬೆಳೆದ ಕಬ್ಬಿಗೆ ಕೊಡಬೇಕಾದ ನ್ಯಾಯಯುತ ಬೆಲೆ ನೀಡದೆ ಸತಾವಣೆ ಮಾಡುವುದು ಒಳಿತಲ್ಲ. 2010-11ರಲ್ಲಿ ಸರಕಾರ ಮತ್ತು ಎಂಪಿಎಂ ಆಡಳಿತವು ಸರಬರಾಜು ಮಾಡಿದ ಕಬ್ಬಿಗೆ ಪ್ರತಿ ಟನ್1800ರೂ ಘೋಷಣೆ ಮಾಡಿತ್ತು. ಆದರೆ ಕಬ್ಬು ಬೆಳೆಗಾರರು ಮಾಡಿದ ಹೋರಾಟದ ಫಲವಾಗಿ ಹೆಚ್ಚುವರಿಯಾಗಿ 100ರೂ ನೀಡುವುದಾಗಿ ಹೇಳಲಾಗಿತ್ತು. 10 ವರ್ಷ ಗತಿಸಿದ್ದರೂ ಹಣ ಪಾವತಿಸದೆ ನಿರ್ಲಕ್ಷ ತಾಳಲಾಗಿದೆ. ಅಂದಿನ ಮುಖ್ಯಮಂತ್ರಿ ಸದಾನಂದಗೌಡರು ರೈತರ ಬಾಕಿ ನೂರು ರೂ ಪಾವತಿಸುವಂತೆಯೂ ಆದೇಶ ಮಾಡಿದ್ದಾರೆ. ಮಂಡ್ಯ ಮೈಶುಗರ್ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಹಣ ಪಾವತಿಯಾಗಿದೆ.
ಆದರೆ ಎಂಪಿಎಂನ ಒಟ್ಟು 4825 ಕಬ್ಬು ಬೆಳೆಗಾರರಿಗೆ 2.94ಕೋಟಿ ರೂ ಬಾಕಿ ಹಣ ವಿತರಣೆಯಾಗಬೇಕಿದೆ. ನಿರಂತರವಾಗಿ ಹೋರಾಟ ಮಾಡಿ ಮನವಿಗಳು ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ. ನಂತರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ವಿಷಾಧ ವ್ಯಕ್ತ ಪಡಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಸಚಿವ ಮಧು ಬಂಗಾರಪ್ಪ ಅವರಿಗೂ ಮನವಿ ನೀಡಲಾಗಿದೆ. ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೂಡಲೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುತ್ತೇವಲ್ಲದೆ ಹಲವು ಬಗೆಯ ಹೋರಾಟಗಳನ್ನೂ ಮಾಡುತ್ತೇವೆಂದರು.
ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ ಮಾತನಾಡಿ ನಾವು ನಮಗೆ ಬರಬೇಕಿರುವ ಬೆವರಿನ ಹಣ ಕೇಳುತ್ತಿದ್ದೇವೆ ವಿನಹಾ ಭಕ್ಷೆ ಬೇಡುತ್ತಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿ, ಕಬ್ಬು ಬೆಳೆಗಾರರಿಂದ ಕಾರ್ಖಾನೆ ಲಾಭ ಮಾಡಿಕೊಂಡಿರುವುದರಿಂದ ನಮ್ಮ ಕಬ್ಬಿನ Agri News ಹೆಚ್ಚುವರಿ ಹಣ ಕೇಳುತ್ತಿದ್ದೇವೆಂದರು.
ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಈರಣ್ಣ, ಪದಾಧಿಕಾರಿಗಳಾದ ಪ್ರಸನ್ನಕುಮಾರ್, ಶಿವರಾಂ, ಪುಟ್ಟಸ್ವಾಮಿಗೌಡ, ಸುಂದರರಾಜ್, ನಾಗರಾಜ್, ಶಂಕರ್ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...