Friday, February 6, 2026
Friday, February 6, 2026

ಶಿಕ್ಷೆ ತೀರ್ಪು : ಅಪರಾಧಿಯ ಮನಸ್ಥಿತಿ ಆಧರಿಸಿ ನೀಡಿ

Date:

ಸುಪ್ರೀಂಕೋರ್ಟ್ ಅಪರಾಧಿಯ ಹಿನ್ನೆಲೆ ಅರಿತು ಶಿಕ್ಷೆ ನೀಡಲು ನ್ಯಾಯಾಲಯಗಳಿಗೆ ಸಲಹೆ ನೀಡಿದೆ. ಅಪರಾಧಿಗಳ ಅಪರಾಧವನ್ನು ಮಾತ್ರವಲ್ಲದೆ, ಅಪರಾಧಿಯ ಮನಸ್ಥಿತಿ ಮತ್ತು ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ಕೂಡ ಗಣನೆಗೆ ತೆಗೆದುಕೊಳ್ಳುವ ಕೆಲಸವನ್ನು ನ್ಯಾಯಾಲಯಗಳು ಮಾಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿ ಎನ್.ನಾಗೇಶ್ವರ ರಾವ್ ನೇತೃತ್ವದ ಪೀಠ ಅಪರಾಧ ಘಟಿಸಿದಾಗ ಅದರ ಹಿಂದೆ ಸುಧಾರಣೆಯ ಸಾಧ್ಯತೆಯೂ ಇರುತ್ತದೆ. ಅಪರಾಧಿ ಸಿಕ್ಕಿಬಿದ್ದಾಗ ಕಠಿಣ ಶಿಕ್ಷೆಯೊಂದೇ ಮಾರ್ಗ ಅಲ್ಲ. ಸುಧಾರಾಣೆ ಮತ್ತು ಪುನರ್ವಸತಿ ಬಗ್ಗೆಯೂ ಯೋಚಿಸಬೇಕು ಎಂದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನ್ನ ಇಬ್ಬರು ಸೋದರರು ಮತ್ತು ಸೋದರಳಿಯನನ್ನು ಕೊಲೆಮಾಡಿ ಮರಣದಂಡನೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷೆಯನ್ನು 30 ವರ್ಷಗಳ ಜೀವಾವಧಿಗೆ ಇಳಿಸಿದ ಸುಪ್ರೀಂಕೋರ್ಟ್ ಈ ಸಲಹೆ ನೀಡಿದೆ.

“ಅಪರಾಧಿಯು ಗ್ರಾಮೀಣ ಭಾಗದ ಬಡತನ ಹಿನ್ನೆಲೆಯಲ್ಲಿ ಬೆಳೆದು ಬಂದ ವ್ಯಕ್ತಿ. ಈ ಘಟನೆಗೂ ಮೊದಲು ಅಂತಹ ಯಾವುದೇ ದುಷ್ಕೃತ್ಯವನ್ನು ಎಸಗಿಲ್ಲ. ಆದ್ದರಿಂದ ಆತನಿಗೆ ಕಠೋರ ಕ್ರಿಮಿನಲ್ ಪಟ್ಟ ಕಟ್ಟುವುದು ಸರಿಯಲ್ಲ” ಎಂದು ನ್ಯಾಯಮೂರ್ತಿ ನಾಗೇಶ್ವರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ambedkar Bhavan Shivamogga ಫೆಬ್ರವರಿ 14. ” ಹ್ಯಾಪಿ ಫೀಟ್- 2026″ ವಿಶೇಷ ನೃತ್ಯ ಪ್ರದರ್ಶನ

Ambedkar Bhavan Shivamogga ನೃತ್ಯಸಿರಿ ಡ್ಯಾನ್ಸ್ ಸ್ಟುಡಿಯೋ ವತಿಯಿಂದ “ಹ್ಯಾಪಿ ಫೀಟ್-2026”...

Dharmasthala Rural Development Project ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಾತ್ಸಲ್ಯ ಕಿಟ್ ವಿತರಣೆ

Dharmasthala Rural Development Project ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ...

ಕರವೇ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಅಧಿಕಾರದ ಪ್ರಮಾಣ...