Tuesday, September 8, 2026
Tuesday, September 8, 2026

ನೇರಯುದ್ಧ, ತೆರೆಮರೆಯ ಸಮರ ಎರಡರಲ್ಲೂ ನಮಗೆ ಜಯ

Date:

ಭಾರತ ಸ್ವಾತಂತ್ರ್ಯ ಪಡೆದ ನಂತರ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದೆ. ಇದು ಐತಿಹಾಸಿಕ ಪ್ರಮಾದ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

1971ರ ಬಾಂಗ್ಲಾದೇಶ ಯುದ್ಧದ ಗೆಲುವಿನ ಸುವರ್ಣ ಮಹೋತ್ಸವ ಆಚರಣೆಗಾಗಿ ಹಮ್ಮಿಕೊಂಡಿದ್ದ,’ ಸ್ವರ್ಣಿಮ್ ವಿಜಯ್ ಪರ್ವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“1971ರ ಸಮರದಲ್ಲಿ ಪಾಕಿಸ್ತಾನದ ಮೇಲೆ ನಾವು ಜಯಗಳಿಸಿದ್ದು ಹೆಮ್ಮೆಯ ಸಂಗತಿ. ಆದರೂ, ಸಹ ಸೋಲನ್ನು ಒಪ್ಪಿಕೊಂಡು ಸುಮ್ಮನಾಗದ ನೇರೆ ದೇಶವು ತೆರೆಮರೆಯಲ್ಲಿ ಭಯೋತ್ಪಾದಕರ ಮೂಲಕ ಭಾರತದ ಮೇಲೆ ಯುದ್ಧವನ್ನು ನಡೆಸುತ್ತಲೇ ಬಂದಿದೆ.

ನಮ್ಮ ಧೈರ್ಯಶಾಲಿ ಯೋಧರು, ಪೊಲೀಸ್ ಪಡೆಗಳು ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತೆಸೆಯಲು ಶ್ರಮಿಸುತ್ತಿವೆ. ನೇರ ಸಮರದಲ್ಲಿ ಜಯಿಸಿದಂತೆಯೇ, ತೆರೆಮರೆಯ ಸಮರದಲ್ಲೂ ಗೆಲ್ಲುತ್ತೇವೆ” ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪಾಕಿಸ್ತಾನ ಪಡೆಗಳು ಬಂಗಾಳಿ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದವು. ಪೂರ್ವ ಪಾಕಿಸ್ತಾನವನ್ನು ಮಾನವೀಯತೆ ಆಧಾರದ ಮೇಲೆ ಸ್ವತಂತ್ರಗೊಳಿಸಬೇಕಿತ್ತು. ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಹೇಳಿಕೆ ಪ್ರಕಾರ, ಅನ್ಯಾಯ ಎಲ್ಲಿ ಕಂಡರು ಕೂಡ ಅದು ಎಲ್ಲಾ ಕಡೆಯ ನ್ಯಾಯಕ್ಕೆ ಮಾರಕ ಎನ್ನುವುದನ್ನು ಮನಗಂಡು ಭಾರತ ವರ್ತಿಸಿತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...

Bhadra Reservoir ಸೆಪ್ಟೆಂಬರ್ 1 ರಿಂದ 10 ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡುಗಡೆ: ಕುಡಿಯುವ ನೀರಿಗೆ ಮಾತ್ರ ಬಳಕೆ

Bhadra Reservoir ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಮತ್ತು ಬಹುಗ್ರಾಮ...