Klive Special Article ನೆನಪು ಹಾರಿಹೋಗುವ ಮುನ್ನ…
ದಾವಣಗೆರೆ ಪತ್ರಕರ್ತರ ಮೇಳ ಕುರಿತು ಇನ್ನೂ
ಒಂದೆರಡು ಅನಿಸಿಕೆ –
ಅಭಿಪ್ರಾಯ ಹೇಳುವುದಿದೆ.
- ಇಬ್ಬರು ಪತ್ರಕರ್ತರು
ಪರಸ್ಪರ ಒಮ್ಮತಕ್ಕೆ ಬರುವುದು ಕಷ್ಟ ಎನ್ನುವ
ಪರಿಸ್ಥಿತಿ ನಮ್ಮದು. ಇಂತಹ ವಾತಾವರಣದಲ್ಲಿ ನಾಡಿನ ಸಾವಿರಕ್ಕೂ ಹೆಚ್ಚು ಪತ್ರಕರ್ತರು ಎರಡು ದಿನ ಒಮ್ಮನಸ್ಸಿನ ಕಲಾಪ ನಡೆಸಿದರು, ಕಷ್ಟ-ಸುಖ
ಹಂಚಿಕೊಂಡರು ಮತ್ತು
ಸರ್ವಾನುಮತದ ನಿರ್ಣಯಗಳಿಗೆ ಕೈ ಜೋಡಿಸಿದರು ಎಂದರೆ
ಆಶ್ಚರ್ಯ ನಿಶ್ಚಿತ.
(ನಾನು ಮತ್ತು ಈಶ್ವರ
ದೈತೋಟರು ವೇದಿಕೆ
ಮೇಲೆ ಮತ್ತು ಕೆಳಗೆ ಇದ್ದು ಕಂಡ ದೃಶ್ಯ ಇದು)
2.ಕೇವಲ ಬೆಂಗಳೂರಿನ
ತಜ್ಞರು ಇಂತಹ ಮೇಳ-
ದಲ್ಲಿ ಭಾಗವಹಿಸಿ, ತಮ್ಮ
ವೃತ್ತಿಪ್ರಭುತ್ವ ಹೇಳಿ ಹೋಗುವುದು ಸರ್ವೇ
ಸಾಮಾನ್ಯ. ದಾವಣಗೆರೆ
ಸಮ್ಮೇಳನದಲ್ಲಿ ಗ್ರಾಮೀಣ ಮತ್ತು ಜಿಲ್ಲಾ
ಪತ್ರಕರ್ತರು ತಮ್ಮ ಕಷ್ಟ
ಸುಖ ಹೇಳಿಕೊಳ್ಳಲು
ಅವಕಾಶವಿದ್ದದ್ದು ಮೆಚ್ಚುವ ಸಂಗತಿ.
- ವಿಶಾಲ ಸಭಾಸದನ,
ಹಳ್ಳಿ ತಿಂಡಿ, ರೊಟ್ಟಿ ಊಟ – ಹೀಗೆ ಉದಾರ
ಮನಸ್ಸಿನ ಸ್ಥಳೀಯ
ಪತ್ರಕರ್ತರ ವ್ಯವಸ್ಥೆ :
ಅಣ್ಣ ಶಾಮನೂರರ
ಮೇಲುಸ್ತುವಾರಿ.. ಇತ್ಯಾದಿ ಸತ್ಕಾರವ್ಯೆಭವ
ವರ್ಣನೆಗೆ ಮೀರಿದಂತಿತ್ತು. - KUWJ ಪದಾಧಿಕಾರಿಗಳು ನಿರ್ವಹಿಸಿದ ಎಚ್ಚರಿಕೆ,
ಕಾರ್ಯಕ್ರಮನಿರ್ವಹಣೆ
ಮತ್ತು ಸಮನ್ವಯತೆ
ಅಭಿನಂದನಾರ್ಹ.
ಸಂಘಟನೆಯ ರೂವಾರಿ
ಮತ್ತು KUWJ ಅಧ್ಯಕ್ಷ
ಶಿವಾನಂದ ತಗಡೂರರ
ಸಾರಥ್ಯ ಸದಾಕಾಲ
ನೆನಪಿನಲ್ಲಿ ಇರುವಂತೆ
ವಿಜೃಂಭಣೆಯಿಂದ
ಸಮಾವೇಶ ನಡೆಯಿತು.
–ಭಾಗವಹಿಸಿದ ಪತ್ರಕರ್ತರ ಪರವಾಗಿ.
Klive Special Article ಲೇ: ಶೇಷಣ್ಣ, ಈಶ್ವರ ದೈತೋಟ.