Vichara Sankirna ಇದೇ ಫೆ, 9 ಶುಕ್ರವಾರದಂದು ಪ್ರಸಿದ್ಧ ಕಾದಂಬರಿಕಾರರು ಹಾಗೂ ಹೋರಾಟಗಾರರಾದ ಬಸವರಾಜ ಕಟ್ಟೀಮನಿಯವರನ್ನು ಕುರಿತು ಬಸವರಾಜ ಕಟ್ಟೀಮನಿ.
ಸಾಹಿತ್ಯ: ಸಮಕಾಲೀನ ಪ್ರಸ್ತುತತೆ ಎನ್ನುವ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಶಿವಮೊಗ್ಗದ ಪ್ರತಿಷ್ಠಿತ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ ಈ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
ಖ್ಯಾತ ಕವಿ, ನಾಟಕಕಾರ ಹಾಗೂ ವಿಮರ್ಶಕರಾದ ಡಾ. ನಟರಾಜ ಹುಳಿಯಾರರವರು ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ.
ಬೆಳಗ್ಗೆ 10:00 ಗಂಟೆಯಿoದ ನಡೆಯುವ ಸಂಕಿರಣದ ವಿವಿಧ ಗೋಷ್ಠಿಗಳಲ್ಲಿ ಡಾ.ಮೇಟಿ ಮಲ್ಲಿಕಾರ್ಜುನ, ಡಾ.ಸಿರಾಜ್ ಅಹಮದ್, ಡಾ.ಸುಭಾಷ್ ರಾಜಮಾನೆ, ಡಾ.ಭಾರತೀದೇವಿ, ಡಾ.ಸಬಿತಾ ಬನ್ನಾಡಿ ಮತ್ತು ಡಾ.ಅರುಣ್ ಜೋಳದ ಕೂಡ್ಲಿಗಿಯವರು ಪ್ರಬಂಧ ಮಂಡಿಸಲಿದ್ದಾರೆ.
ಮದ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಡಾ.ರಾಜೇಂದ್ರ ಚೆನ್ನಿ, ಡಾ ಬಾಳಾಸಾಹೇಬ ಲೋಕಾಪುರ ಹಾಗೂ ಡಾ.ರಜನಿ ಪೈ ಭಾಗವಹಿಸಲಿದ್ದಾರೆ. ಡಾ.ಕೆ.ಆರ್ ದುರ್ಗಾದಾಸ್ ರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ವಿಚಾರ ಸಂಕಿರಣವು ದುರ್ಗಿಗುಡಿಯಲ್ಲಿರುವ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ನಡೆಯಲಿದೆ. ಈ ಮಹತ್ವಪೂರ್ಣ ವಿಚಾರ ಸಂಕಿರಣವನ್ನು ಕುರಿತು ಮಾಧ್ಯಮ ಮಿತ್ರರು ಪ್ರಚಾರ ನೀಡಬೇಕೆಂದು ಕೋರಲಾಗಿದೆ.
ಹೆಸರಾಂತ ಬರಹಗಾರರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸದಸ್ಯರಾದ ಡಾ.ಬಸವರಾಜ ಸಾದರರವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಅಧ್ಯಕ್ಷತೆಯನ್ನು ಪ್ರಸಿದ್ಧ ಕಾದಂಬರಿಕಾರರಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ್ ರವರು ವಹಿಸಲಿದ್ದಾರೆ. ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರಾದ ಬಸವರಾಜ ಕಟ್ಟೀಮನಿಯವರು ಹೆಸರಾಂತ ಕಾದಂಬರಿಕಾರರು, ಕತೆಗಾರರು ಹಾಗೂ ಪತ್ರಕರ್ತರಾಗಿದ್ದರು.
Vichara Sankirna 46 ಕಾದಂಬರಿಗಳು, 10 ಕಥಾಸಂಕಲನಗಳು, ಅಲ್ಲದೆ ನಾಟಕ, ಪ್ರವಾಸಿ ಕಥನ ಮುಂತಾದ ಅನೇಕ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದರು. ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರು ಆಗಿದ್ದ ಅವರು ಅನೇಕ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿದ್ದರು.
ಅವರ ಪ್ರಮುಖ ಕಾದಂಬರಿಗಳಲ್ಲಿ ಸ್ವಾತಂತ್ರ್ಯದೆಡೆಗೆ, ಮಾಡಿಮಡಿದವರು, ಜ್ವಾಲಾಮುಖಿಯ ಮೇಲೆ, ಜರತಾರಿ ಜಗದ್ಗುರು, ಕಾದಂಬರಿಗಳು ಬಹು ಪ್ರಸಿದ್ಧವಾಗಿವೆ. ಅವರ ‘ಜ್ವಾಲಾಮುಖಿಯ ಮೇಲೆ’ ಕಾದಂಬರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಕೂಡ ಲಭಿಸಿತ್ತು. ಕಟ್ಟಿಮನಿಯವರು ವಿಧಾನಪರಿಷತ್ತಿನ ಸದಸ್ಯರು ಕೂಡಾ ಆಗಿದ್ದರು. ಗ್ರಾಮೀಣ ಬಡತನ, ರೈತರ ಬವಣೆಗಳು, ಸ್ವಾತಂತ್ರ್ಯ ಚಳುವಳಿ, ಕಾರ್ಮಿಕ ಹೋರಾಟಗಳು, ಧಾರ್ಮಿಕ ಸಂಸ್ಥೆಗಳ ಅನೈತಿಕತೆ ಅಲ್ಲದೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಕೂಡ ಸರಳವಾದ ಶೈಲಿ, ಆಕರ್ಷಕ ಪಾತ್ರ ಚಿತ್ರಣ, ವಾಸ್ತವಿಕತೆ ಇವುಗಳಿಂದಾಗಿ ಕಟ್ಟೀಮನಿಯವರು ಜನಪ್ರಿಯ ಬರಹಗಾರರಾಗಿದ್ದರು.
ಪ್ರಗತಿಪರ ಆದರ್ಶಗಳಿಗೆ ಬದ್ಧವಾಗಿದ್ದರು. ಅವರ ಕಾದಂಬರಿಗಳು, ಕೃತಿಗಳು ಇಂದಿನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿವೆ. ಹಾಗಾಗಿ ಅವುಗಳ ಚರ್ಚೆಯ ಈ ವಿಚಾರ ಸಂಕಿರಣವು ಇಂದಿಗೆ ಅವಶ್ಯಕವಾಗಿದೆ.
ಈ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರಿಗೆ ಸರ್ಟಿಫಿಕೇಟ್ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯಿರುತ್ತದೆ.
ಸಾರ್ವಜನಿಕರು, ಸಾಹಿತ್ಯಾಸಕ್ತರು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಮಿತ್ರರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೋಹನ್ ಕುಮಾರ್ : 8123459718 ಡಾ.ಪವಿತ್ರ : 9743665083 ರವರನ್ನು ಸಂಪರ್ಕಿಸಲು ಕೋರಲಾಗಿದೆ.