Friday, March 20, 2026
Friday, March 20, 2026

Sports News ತನಿಶಿ ಕ್ರಿಕೆಟರ್ಸ್ ವಿನೋಬನಗರ ತಂಡಕ್ಕೆ ಟ್ಯಾಂಕ್ ಪ್ರಿಮೀಯರ್ ಲೀಗ್ಸೀಸನ್ 2 ಪ್ರಶಸ್ತಿ

Date:

Sports News ಶಿವಮೊಗ್ಗ, ವಿನೋಬನಗರದ ಸಿಹಿಮೊಗ್ಗೆ ಕನ್ನಡ ಯುವ ವೇದಿಕೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಯುವಪಡೆ ವತಿಯಿಂದ ಫೆ.೩ ಮತ್ತು ೪ರಂದು ಎ.ಟಿ.ಎನ್.ಸಿ.ಸಿ ಮೈದಾನದಲ್ಲಿ ಆಯೋಜಿಸಿದ್ದ ‘ಟೆನ್ನಿಸ್ ಬಾಲ್ ಕ್ರಿಕೇಟ್’ ಪಂದ್ಯಾವಳಿಯ ಟ್ಯಾಂಕ್ ಪ್ರೀಮಿಯರ್ ಲೀಗ್ ಸೀಸನ್-2ರಲ್ಲಿ ತನಿಶಿ ಕ್ರಿಕೆಟರ್ಸ್ ವಿನೋಬನಗರ ತಂಡವು ಎ.ಜೆ. ಕ್ರಿಕೆಟರ್ಸ್ ವಿನೋಬನಗರ ತಂಡದ ವಿರುದ್ಧ 18ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸುವ ಮುಖಾಂತರ ಟ್ಯಾಂಕ್ ಪ್ರೀಮಿಯರ್ ಲೀಗ್ ಕಪ್ ತನ್ನ ಮುಡಿಗೆರಿಸಿಕೊಂಡಿದೆ.
ಎರಡು ದಿನಗಳ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದೆ.

ವಿಶೇಷವಾಗಿ ವಿನೋಬನಗರ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ನೇತೃತ್ವದಲ್ಲಿ ಪೊಲೀಸ್ ತಂಡ ಎರಡು ಲೀಗ್ ಮ್ಯಾಚ್‌ಗಳಲ್ಲಿ ಹಾಗೂ ಶಿವಾಲಯ ಟ್ಯಾಂಕನ ಗುರುಪ್ರಸಾದ್ ಅವರ ನೇತೃತ್ವದ ಕಡ್ಡಿಪುಡಿ ತಂಡ ಅತಿ ಉತ್ಸಾಹಕತೆಯಿಂದ ಆಟವಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಈ ಪಂದ್ಯಾವಳಿಯ ಮುಖ್ಯ ರೂವಾರಿಗಳಾಗಿ ಖ್ಯಾತ ಉದ್ಯಮಿ ಪರಮೇಶ್ವರ್, ಮಾಜಿ ಉಪ ಮೇಯರ್ ಹೆಚ್.ಪಾಲಾಕ್ಷಿ, ಕಾಂಗ್ರೆಸ್ ಪಕ್ಷದ ಯುವ ನಾಯಕ ಕೆ.ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರೀಶ್, ಭಾಗವಹಿಸಿದ್ದರು.

Sports News ಈ ಸಂದರ್ಭದಲ್ಲಿ ಆಯೋಜಕರು ಹಾಗೂ ಸಿಹಿಮೊಗ್ಗೆ ಕನ್ನಡ ಯುವ ವೇದಿಕೆಯ ಅಧ್ಯಕ್ಷ ಟಿ.ಗುರುಪ್ರಸಾದ್, ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಯುವ ಪಡೆಯ ಅಧ್ಯಕ್ಷ ಸಂದೀಪ್ ಸುಂದರ್‌ರಾಜ್ ಪ್ರಮುಖರಾದ ಶ್ರೀಕಾಂತ್, ರಮೇಶ್, ಜಶ್ವಂತ್, ರಾಯಲ್ಸ್ ಟೀಮ್‌ನ ಸಂತೋಷ್, ಲೋಹಿತ್, ಮನೋಜ್, ರವಿಕಿರಣ್, ರವಿ, ಜಿಮ್ ಶರತ್, ಹರೀಶ್, ಚಂದನ್, ಮಾಲತೇಶ್, ಚಂದನ್, ಕಾರ್ತಿಕ್ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...