Kannada Literature Conference ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ನಡೆಯುತ್ತಿರುವ 18 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುವರ್ಣ ಸ್ವರ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ ಹಾಗೂ ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತಿನ ಕಲಾವಿದರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ರಾಷ್ಟ್ರಕವಿ ಕುವೆಂಪುರವರ 6 ಗೀತೆಗಳನ್ನು ಒಳಗೊಂಡoತೆ ವಿಶೇಷ ಗಾಯನವನ್ನು ನಡೆಸಿಕೊಟ್ಟರು.
ಅಲ್ಲದೇ ವರಕವಿ ಬೇಂದ್ರೆ, ಡಾ.ಎನ್.ಎಸ್ ಲಕ್ಷ್ಮೀ ನಾರಾಯಣ ಭಟ್ ಮುಂತಾದ ಕವಿಗಳ ಭಾವಗೀತೆಗಳ ಗಾಯನದ ಜೊತೆಯಲ್ಲಿ ಶಿಶುನಾಳ ಷರೀಫರ ತತ್ವಪದ ಹಾಗೂ ಜಾನಪದ ಗೀತೆಯ ಗಾಯನ ನಡೆಯಿತು.
Kannada Literature Conference ಪತ್ರಕರ್ತ ದೀಪಕ್ ಸಾಗರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಗಾಯಕಿಯರಾದ ಉಜ್ವಲಾ ರವಿಕುಮಾರ್, ಲಕ್ಷ್ಮೀ ಮಹೇಶ್, ಸಹನಾ ಜಿ.ಭಟ್, ಉಮಾ ಕುಲಕರ್ಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಇತರರು ಪಾಲ್ಗೊಂಡಿದ್ದರು.
