Sunday, September 27, 2026
Sunday, September 27, 2026

Rangayana Shivamogga ನಗರದ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ರಂಗಗೀತೆಗಳ ಕಾರ್ಯಾಗಾರ

Date:

Rangayana Shivamogga ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ದಿನಾಂಕ:18.01.2024 ರಂದು ಗುರುವಾರ ಬೆಳಿಗ್ಗೆ 9.00 ರಿಂದ ಸಂಜೆ 7.00 ಗಂಟೆಯವರೆಗೆ ಶಿವಮೊಗ್ಗ ನಗರದ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಂಗಗೀತೆಗಳ ಮೂಲಕ ರಂಗಭೂಮಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ‘ಒಂದು ದಿನದ ರಂಗಗೀತೆಗಳ ತರಬೇತಿ ಕಾರ್ಯಾಗಾರ’ವನ್ನು ರಂಗಾಯಣ, ಸುವರ್ಣ ಸಾಂಸ್ಕೃತಿಕ ಭವನ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ ಇಲ್ಲಿ ಆಯೋಜಿಸಿದೆ.

ಈ ಕಾರ್ಯಾಗಾರವನ್ನು ಬೆಳಿಗ್ಗೆ 9.00 ಗಂಟೆಗೆ ಉಸ್ತಾದ್ ಹುಮಾಯೂನ್ ಹರ್ಲಾಪುರ್, ಹಿಂದೂಸ್ತಾನಿ ಗಾಯಕರು, ಶಿವಮೊಗ್ಗ ಇವರು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ.ಹೆಚ್.ಎಸ್.ನಾಗಭೂಷಣ್, ಪ್ರಾಂಶುಪಾಲರು, ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು, ಶಿವಮೊಗ್ಗ ಇವರು ಭಾಗವಹಿಸಲಿದ್ದಾರೆ.

Rangayana Shivamogga ಈ ಕಾರ್ಯಾಗಾರದಲ್ಲಿ ಕಲಿತ ರಂಗಗೀತೆಗಳನ್ನು ಅದೇ ದಿನ ಸಂಜೆ 5.30 ರಿಂದ 7.00 ಗಂಟೆಯವರೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾಗುವುದು. ಈ ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ವಿಜಯಲಕ್ಷ್ಮಿ, ಹಿರಿಯ ರಂಗಕರ್ಮಿಗಳು, ಶಿವಮೊಗ್ಗ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಡಾ.ಎಮ್. ವೆಂಕಟೇಶ್, ಪ್ರಾಂಶುಪಾಲರು, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ ಇವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಾರ್ಯಾಗಾರದಲ್ಲಿ ಹಾಲಸ್ವಾಮಿ ಆರ್.ಎಸ್., ಕಾರ್ಯಾಗಾರದ ಸಂಚಾಲಕರು, ರಂಗಸಮಾಜದ ಮಾಜಿ ಸದಸ್ಯರು ಇವರ ಉಪಸ್ಥಿತಿ ಇರುತ್ತದೆ ಹಾಗೂ ಡಾ.ಶೈಲಜಾ ಎ.ಸಿ., ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಾಗಾರದ ಸಮಾರೋಪ ಸಮಾರಂಭಕ್ಕ್ಕೆ ಪ್ರವೇಶ ಉಚಿತವಾಗಿರುತ್ತದೆ. ಆಸಕ್ತರು ಸಂಜೆ 5.30 ರಿಂದ 7.00 ರವರೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...