Thursday, April 16, 2026
Thursday, April 16, 2026

Sports News ವಿಶೇಷ ಚೇತನರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಿಂಚಿದ ಪ್ರತಿಭೆ ಟಿ.ಎಲ್.ರೋಹಿಣಿ

Date:

Sports News ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ,ಶಿವಮೊಗ್ಗ ಇವರ ಸಂಯುಕ್ತ ಆಶಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿಶೇಷ ಚೇತನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ತಮ್ಮಡಿಹಳ್ಳಿ,ಸರ್ಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ಕ್ರೀಡಾಪಟುವಾದ ರೋಹಿಣಿ ಟಿ.ಎಲ್.ಗುಂಡು ಎಸೆತ, ಜಾವಲಿನ್ ನಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ, ಗುಂಡು ಎಸೆತದಲ್ಲಿ ದ್ವಿತೀಯ, ಜಾವಲಿನ್ ನಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿರುತ್ತಾಳೆ.

ಈ ಪ್ರತಿಭೆಯು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು, ಕ್ರೀಡೆಯ ಜೊತೆಗೆ ಓದಿನಲ್ಲೂ ಪ್ರತಿಭಾನ್ವಿತರಾಗಿರುತ್ತಾಳೆ. ಲೋಕೇಶ್ ಮತ್ತು ಸವಿತಾ ದಂಪತಿಗಳ ಪುತ್ರಿಯಾಗಿರುತ್ತಾಳೆ.

ದೈಹಿಕ ಶಿಕ್ಷಣ ಶಿಕ್ಷಕರಾದ ಕಾಳನಾಯ್ಕ ಅವರಲ್ಲಿ ತರಬೇತಿಯನ್ನು ಪಡೆಯುತ್ತಿರುವುದು ಮತ್ತೊಂದು ವಿಶೇಷ.

Sports News ರಾಜ್ಯಮಟ್ಟದ ವಿಶೇಷ ಚೇತನ ಅಥ್ಲೆಟಿಕ್ಸ್ ಕ್ರೀಡಾಕೂಟವು ಮಧುಗಿರಿ ಜಿಲ್ಲೆಯಲ್ಲಿ 17 ರಿಂದ 19 ವರೆಗೆ ನಡೆಯಲಿದೆ. ಅಲ್ಲಿಯೂ ಸಹ ಉತ್ತಮ ಆಟದ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗುವಂತಹ ಅರ್ಹತೆಯನ್ನು ಪಡೆಯಲಿ ಎಂದು ನಮ್ಮೆಲ್ಲರ ಆಶಯ.

ಕ್ರೀಡಾ ಪ್ರತಿಭೆಯ ಮುಂದಿನ ಕ್ರೀಡಾ ಜೀವನ ಯಶಸ್ವಿ ಯಾಗಲೆಂದು ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದದವರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು , ತಮ್ಮಡಿಹಳ್ಳಿ ಗ್ರಾಮದ ನಾಗರೀಕರು, ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಗುಡ್ ಲಕ್ ಆರೈಕೆ ಕೇಂದ್ರದಲ್ಲಿನ ಅನಾಥ ಮಹಿಳೆಯರಿಗೆ ಭಾವನಾ ಜೆಸಿಐನಿಂದ ಉಡುಪು ವಿತರಣೆ

JCI Shivamogga ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ಭಾವನದಿಂದ ಗುಡ್...

Brahmakumari Ishwariya University ಆಧ್ಯಾತ್ಮ , ಧ್ಯಾನ ಮತ್ತು ಯೋಗ ಮನುಷ್ಯನ ನೈಜ ಸಂಪತ್ತು-ಬ್ರಹ್ಮಕುಮಾರಿ ಸ್ವಾತಿ

Brahmakumari Ishwariya University ಒತ್ತಡ ಮತ್ತು ಅಶಾಂತಿಯ ಜೀವನಶೈಲಿಯಲ್ಲಿ ಬದುಕುತ್ತಿರುವ ಜನರಿಗೆ...

Dr. B.R. Ambedkar ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ 19 ಜನಕ್ಕೆ ಜೀವ ವಿಮಾ ಬಾಂಡ್ ವಿತರಣೆ

Dr. B.R. Ambedkar ಶಿವಮೊಗ್ಗ ಜಿಲ್ಲೆಯ ಹೊಳೆ ಬೆನವಲ್ಲಿ ಗ್ರಾಮದಲ್ಲಿ ಸಂವಿಧಾನ...

VISL ಡಾ.ಅಂಬೇಡ್ಕರ್ ಮತ್ತು ವಿಶ್ವೇಶ್ವರಯ್ಯನವರ ಜೀವನದ ವಿಚಾರಗಳು ಮಕ್ಕಳಿಗೆ ಅಗತ್ಯ- ಬಿ.ವಿಶ್ವನಾಥ್

VISL ವಿಐಎಸ್‌ಎಲ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ದ ಆಯೋಜಿಸಲಾಗಿತ್ತು. ಈ...