Karate Competition ಶಿವಮೊಗ್ಗ ರಾಜೇಂದ್ರನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕು. ನಿಖಿಲ್ .ಪಿ, ಇವರು ಶಿವಮೊಗ್ಗ ವೆಂಕಟೇಶನಗರದ ಪೇಂಟರ್ ಶ್ರೀಯುತ ಪ್ರಸನ್ನಕುಮಾರ್ ಮತ್ತು ಶ್ರೀಮತಿ ಪಲ್ಲವಿ ದಂಪತಿಗಳ ಪುತ್ರನಾಗಿದ್ದು, ರಾಷ್ಟ್ರ ಮಟ್ಟದ ಜೂನಿಯರ್ ಕರಾಟೆ ಸ್ಪರ್ಧೆಗಳಾದ 2023ರ ಮಹಾತ್ಮಗಾಂಧಿ ಮೆಮೋರಿಯಲ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್, ೫ನೇ ಆಲ್ ಇಂಡಿಯಾ ಇನ್‌ವಿಟೇಷನಲ್ ಕರಾಟೆ ಚಾಂಪಿಯನ್ ಶಿಪ್, ಬೆಂಗಳೂರು ಇಂಡಿಪೆoಡೆನ್ಸ್ ಕಪ್, ನ್ಯಾಷನಲ್ ಲೆವೆಲ್ ಕರಾಟೆ ಟೂರ್ನಮೆಂಟ್ ನಲ್ಲಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡು, ಪಾರಿತೋಷಕಗಳು, ರೂ. 50ಸಾವಿರ ನಗದು ಹಾಗೂ ಒಂದು ಪಲ್ಸರ್ ಮೋಟಾರ್ ಬೈಕ್‌ನ್ನು ಬಹುಮಾನವಾಗಿ ಪಡೆದಿರುತ್ತಾನೆ ಕಳೆದ ಒಂದು ವರ್ಷದಿಂದ ಶಿವಮೊಗ್ಗದ ಮಂಜುನಾಥ್ ಸನ್ಸೆ ಎಂಬುವವರ ಬಳಿ ಕರಾಟೆ ತರಬೇತಿ ಪಡೆಯುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಚಾಂಪಿಯನ್‌ಶಿಪ್ ಗಳಿಸಿದ್ದು, ರೋಟರಿ ಪೂರ್ವ ಶಾಲೆಯ ಕ್ರೀಡಾ ಕ್ಷೇತ್ರದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ.
ಇವರ ಸಾಧನೆಯನ್ನು ಶಿವಮೊಗ್ಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಸಿ.ಆರ್. ಪರಮೇಶ್ವರಪ್ಪ, ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಸತೀಶ್‌ಚಂದ್ರ, ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್(ರಿ.,)ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಉಪಾಧ್ಯಕ್ಷರಾದ ರೊ. ಡಾ. ಪರಮೇಶ್ವರ್ ಡಿ. ಶಿಗ್ಗಾಂವ್, ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಈ ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿ ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.
Karate Competition ಇಂತಹ ಪ್ರತಿಭಾವಂತ ವಿದ್ಯಾರ್ಥಿಯು ತನ್ನ ಶಿಕ್ಷಣವನ್ನು ಮುಂದುವರೆಸಲು ಅನುಕೂಲವಾಗುವಂತೆ ಟ್ರಸ್ಟ್ನ ಉಪಾಧ್ಯಕ್ಷರಾದ ರೊ. ಡಾ. ಪರಮೇಶ್ವರ್ ಡಿ. ಶಿಗ್ಗಾಂವ್ ಹಾಗೂ ಟ್ರಸ್ಟಿ ಮತ್ತು ಭಾರ್ಗವಿ ಫ್ಯುಯೆಲ್ಸ್ನ ಮಾಲೀಕರಾದ ರೊ. ನಾಗರಾಜ್ ಪಿ., ಇವರು ಕು. ನಿಖಿಲ್ .ಪಿ, ಇವರ 7ನೇ ತರಗತಿಯಿಂದ 10ನೇ ತರಗತಿವರೆಗಿನ ಶಾಲಾ ಶುಲ್ಕವನ್ನು ಇಬ್ಬರು ಸಮನಾಗಿ ಹಂಚಿಕೊ0ಡು, ಭರಿಸುವುದಾಗಿ ವಾಗ್ದಾನ ಮಾಡಿದರು. ಈ ವಾಗ್ದಾನಕ್ಕಾಗಿ ಮ್ಯಾನೇಜಿಂಗ್ ಟ್ರಸ್ಟಿ, ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿಯವರು ಉಭಯತ್ರರಿಗೂ ಆಡಳಿತ ಮಂಡಳಿ ವತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ.