Thursday, June 18, 2026
Thursday, June 18, 2026

Kamla Nehru College ನ. 18 ರಂದು ಶಿವಮೊಗ್ಗದಲ್ಲಿ ಆನಂದ-ಆರೋಗ್ಯ-ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Date:

Kamla Nehru College ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ ನ. 18ರ ಶನಿವಾರ ಸಂಜೆ 5:30ಕ್ಕೆ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮನೋವೈದ್ಯೆ, ಕಲಾವಿದೆ ಡಾ ಕೆ.ಎಸ್. ಪವಿತ್ರಾರವರು ಆನಂದ – ಆರೋಗ್ಯ ಕುರಿತ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.

ಡಾ. ಕೆ. ಎಸ್. ಪವಿತ್ರಾರವರು, ವೃತ್ತಿಯಿಂದ ವೈದ್ಯರು. ನೃತ್ಯ ಹಾಗೂ ಸಾಹಿತ್ಯ ರಚನೆ ಇವರ ಹವ್ಯಾಸಗಳಾಗಿದ್ದು, ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದಾರೆ. ಇವರಿಗೆ ಹತ್ತು ಹಲವು ಪ್ರಶಸ್ತಿಗಳ ಜೊತೆಗೆ ರಾಷ್ಟ್ರಹಾಗೂ ಅಂತರಾಷ್ಟ್ರೀಯ ಫೆಲೋಷಿಪ್ ಗಳ ಮನ್ನಣೆ ಸಂದಿವೆ.

Kamla Nehru College ದಿನ ನಿತ್ಯ ನೋಡುವ, ಓದುವ, ಕೇಳುವ ಸಾಹಿತ್ಯ,ಲಲಿತ ಕಲೆಗಳಿಂದ ಸ್ವಸ್ಥ ಜೀವನಕ್ಕೆ ಮಾರ್ಗದರ್ಶನ ಪಡೆಯುವ ಸಾಧ್ಯತೆಗಳ ಕುರಿತ ಒಂದು ಪ್ರಸ್ತುತಿ -ಆನಂದ ಆರೋಗ್ಯ. ಕನ್ನಡದ ಆಯ್ದ ಸಾಹಿತ್ಯ ಭಾಗಗಳನ್ನು ನೃತ್ಯ, ಸಂಗೀತ ಹಾಗೂ ಮಾತುಗಳ ಮೂಲಕ ಮಾನಸಿಕ ಆರೋಗ್ಯದ ಹಲವು ಮುಖಗಳನ್ನು ಪರಿಚಯಿಸುವ ಒಂದು ಪ್ರಯತ್ನ ಇದಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...