Forest Department ಇತ್ತೀಚೆಗೆ ಹುಲಿ ಪೆಂಡೆಂಟ್ ಪ್ರಕರಣಗಳೂ ಚರ್ಚೆಯಲ್ಲಿವೆ. ಈ ಹಿನ್ನಲೆಯಲ್ಲಿ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸಂಕಷ್ಟ ಎದುರಾಗಿದೆ.
ಬಿಗ್ ಬಾಸ್ ಸ್ಪರ್ಧಿ ಹಾಗೂ ರೈತ ಸಂತೋಷ್ ವರ್ತೂರು ಹುಲಿ ಉಗುರು ಪೆಂಟೆಂಡ್ ಧರಿಸಿ ಬಂಧನವಾದ ಬಳಿಕ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿದೆ.
ರಾಜಕಾರಣಿಗಳ ಮಕ್ಕಳು, ದೊಡ್ಡ ದೊಡ್ಡ ನಟರು ಸೇರಿದಂತೆ ಹುಲಿ ಉಗುರು ಧರಿಸಿದ್ದವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಅಸಲಿಯೋ ನಕಲಿಯೋ ಎಂದು ಪರಿಶೀಲಿಸಿತ್ತು. ಆದರೆ ಈಗ ಇದನ್ನೇ ನಂಬಿ ಬದುಕುತ್ತಿದ್ದ ಹಕ್ಕಿ ಪಿಕ್ಕಿ ಜನಾಂಗದವರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.
Forest Department ಕೃತಕವಾಗಿ ಹುಲಿ ಉಗುರು ತಯಾರಿಸುವ ನೈಪುಣ್ಯತೆಯನ್ನು ಹಕ್ಕಿ ಪಿಕ್ಕಿ ಜನಾಂಗ ಹೊಂದಿದೆ. ಕುಲಕಸುಬು ಕೂಡ ಹೌದು. ಸುಮಾರು 50 ವರ್ಷಗಳಿಂದಲೂ ಕೃತಕ ಹುಲಿ ಉಗುರು ತಯಾರಿಸಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದವರಲ್ಲಿಯೂ ಆತಂಕ ಶುರುವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸುವ ಸಾಧ್ಯತೆ ಇದೆ.