Thursday, June 18, 2026
Thursday, June 18, 2026

Thailand ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಇನ್ಮುಂದೆ ಥೈಲ್ಯಾಂಡ್ ಗೆ ಹೋಗಲು ವೀಸಾ ಬೇಕಿಲ್ಲ!

Date:

Thailand ನವೆಂಬರ್‌ನಿಂದ ಮೇ 2024 ರವರೆಗೆ ಭಾರತ ಮತ್ತು ತೈವಾನ್‌ನಿಂದ ಆಗಮನಕ್ಕೆ ವೀಸಾ ಅವಶ್ಯಕತೆಗಳನ್ನು ಥೈಲ್ಯಾಂಡ್ ರದ್ದು ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋವಿಡ್‌ – 19 ಬಳಿಕ ವಿದೇಶಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಸಾಕಷ್ಟು ಹೆಚ್ಚಿದೆ.

ವರ್ಷಾಂತ್ಯ, ಹೊಸ ವರ್ಷಾರಂಭ, ಬೇಸಿಗೆ ಕಾಲದ ರಜೆಗಳು ಸೇರಿ ಋತುವಿನಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಪ್ರಯತ್ನದಲ್ಲಿ ಥೈಲ್ಯಾಂಡ್‌ ಸರ್ಕಾರ ಈ ಕ್ರಮ ಕೈಗೊಂಡಿದೆ.

ಥೈಲ್ಯಾಂಡ್‌, ಮಾಲ್ಡೀವ್ಸ್‌, ಯುಎಇ, ಶ್ರೀಲಂಕಾದಂತಹ ನೆರೆಯ ದೇಶಗಳಿಗೆ ಹೆಚ್ಚು ಪ್ರವಾಸಿಗರು ಹೋಗುತ್ತಾರೆ. ಈ ಹಿನ್ನೆಲೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಈ ದೇಶ ವೀಸಾ ಅಗತ್ಯತೆಯನ್ನೇ ರದ್ದು ಮಾಡಿದೆ.

ಈ ವರ್ಷ ಅಂದರೆ 2023ರ ಜನವರಿಯಿಂದ ಅಕ್ಟೋಬರ್ 29 ರವರೆಗೆ, ಥೈಲ್ಯಾಂಡ್‌ಗೆ 22 ಮಿಲಿಯನ್ ಅಂದರೆ 2.2 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ 927.5 ಬಿಲಿಯನ್ ಬಹ್ಟ್ ಅಂದರೆ (25.67 ಬಿಲಿಯನ್‌ ಡಾಲರ್‌) ಆದಾಯ ಹರಿದುಬಂದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Thailand ಭಾರತ ಮತ್ತು ತೈವಾನ್‌ ಪ್ರವಾಸಿಗರಿಗೆ 30 ದಿನಗಳವರೆಗೆ ಥೈಲ್ಯಾಂಡ್‌ಗೆ ವೀಸಾ ಇಲ್ಲದೆ ಪ್ರವೇಶಿಸಬಹುದು ಎಂದು ಅಲ್ಲಿನ ವಕ್ತಾರ ಚಾಯ್ ವಾಚರೋಂಕೆ ಹೇಳಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...