Monday, May 4, 2026
Monday, May 4, 2026

Department of Transport ಸದ್ಯದಲ್ಲೇ 8 ಸಾವಿರ ಹೊಸ ಬಸ್, 8 ಸಾವಿರ ಸಿಬ್ಬಂದಿ ನೇಮಕ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Date:

Department of Transport ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಅನುಕೂಲವಾಗಿದೆ. ಆದರೂ ಬಿಜೆಪಿ ನಾಯಕರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,13,888 ಸಾರಿಗೆ ಇಲಾಖೆಯ ನೌಕರರು ನಿವೃತ್ತಿ ಹೊಂದಿದ್ದರು. ನಾನು 2013ರಲ್ಲಿ ಮಂತ್ರಿ ಇದ್ದಾಗ ನೇಮಕಾತಿ ಮಾಡಿರುವುದು ಬಿಟ್ಟರೆ ಮತ್ತೆ ನೇಮಕಾತಿಯಾಗಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ನಾಲ್ಕು ವರ್ಷಗಳಲ್ಲಿ ಯಾವ ನೇಮಕಾತಿಯನ್ನೂ ಮಾಡಿರಲಿಲ್ಲ ಎಂದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ 3800 ಶೆಡ್ಯೂಲ್ ರದ್ದು ಮಾಡಲಾಗಿತ್ತು. ಹೀಗಾಗಿ ಚಾಲಕರ ಕೊರತೆಯಾಗುತ್ತದೆ. ಹಳೆ ಬಸ್ ಗುಜರಿಗೆ ಹಾಕುತ್ತೇವೆ, ಹೊಸ ಬಸ್ ಬಂದಿಲ್ಲ. 5500 ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈಗಾಗಲೇ 13,800 ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದು, ಎಂಟು ಸಾವಿರ ಬಸ್ ಖರೀದಿಗೆ ಅನುಮತಿ ದೊರಕಿದೆ. ಖರೀದಿ ಪ್ರಕ್ರಿಯೆ ಆರಂಭವಾಗಿದೆ ಎಂದು ವಿವರಿಸಿದರು.

Department of Transport ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಒಂದೂ ಹೊಸ ಬಸ್ ಖರೀದಿ ಮಾಡಲಿಲ್ಲ.ಅಧಿಕಾರದ ಕೊನೆಯಲ್ಲಿ ಹೊಸ ಬಸ್ ಖರೀದಿಗೆ ತೀರ್ಮಾನಿಸಿದರೂ, ಅನುಷ್ಠಾನಕ್ಕೆ ತರಲಿಲ್ಲ. ನಮ್ಮ ಸರ್ಕಾರದಲ್ಲಿ ಹೊಸ ಬಸ್ ಬರುತ್ತಿವೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...