Harathalu Halappa ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು, ಶುಕ್ರವಾರ ರಿಪ್ಪನಪೇಟೆ ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಂತರ ಅವರು, ಪತ್ರಕರ್ತರೊಂದಿಗೆ ಮಾತನಾಡಿ,ಪ್ರಜಾಪ್ರಭುತ್ವ ವ್ಯವಸ್ಥೆ ಅಂದರೆ ಹಾಗೆ ಯಾರು ಚುನಾಯಿತ ಪ್ರತಿನಿಧಿ ಆಗಿರುತ್ತಾರೋ ಅವರೇ ಉದ್ಘಾಟನೆ ಹಾಗೂ ಗುದ್ದಲಿಪೂಜೆ ಮಾಡಬೇಕು. ಆದರೆ, ಯಾರೋ ತಂದ ಅನುದಾನಕ್ಕೆ ನಾನೇ ತಂದೆ ಎಂದು ಸುಳ್ಳು ಹೇಳಿಕೊಂಡು ತಿರುಗುವುದು ಬಿಡಬೇಕು. ಸರ್ಕಾರದಿಂದ ಅನುದಾನ ತರುವುದು ಒಂದು ಕಲೆ ಹಾಗೂ ಸಾಮರ್ಥ್ಯ ವಿಧಾನಸೌಧದ ಕಂಬ-ಕಂಬಗಳನ್ನು ಸುತ್ತಿ ಓಡಾಡಬೇಕು ಹಾಗಿದ್ದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಪಡಿಸಬಹುದು.ಅಮ್ಮನಘಟ್ಟ ಕ್ಷೇತದ ಅಭಿವೃದ್ಧಿಗೆ ನಮ್ಮ ಅವಧಿಯಲ್ಲಿ 1.50 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇವೆ. ಹಾಲಿ ಶಾಸಕರು ಅನುದಾನ ಬಿಡುಗಡೆಗೊಳಿಸುವುದರೊಂದಿಗೆ, ಇನ್ನು ಹೆಚ್ಚಿನ ಅನುದಾನ ತಂದು ತಾಯಿಯ ಪುಣ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ ಎಂದು ಹೇಳಿದರು.
Harathalu Halappa ವಿದ್ಯುತ್ ಲೋಡ್ ಶೆಡ್ಡಿಂಗ್ ಬಗ್ಗೆ ಮಾತನಾಡಿ, ಜನಸಾಮಾನ್ಯರ ದಿನಚರಿ ಪ್ರಾರಂಭವಾಗುವುದೇ ವಿದ್ಯುತ್ ನಿಂದ ಹಾಗೂ ಮುಖ್ಯವಾಗಿ ರೈತರಿಗೆ ತುಂಬಾ ಅನಾನುಕೂಲವಾಗುತ್ತಿರುವ ಬಗ್ಗೆ ನಮ್ಮ ನಾಯಕರು ರಾಜ್ಯಮಟ್ಟದಲ್ಲಿ ಚರ್ಚೆ ನೆಡೆದಿದೆ. ಸಮರ್ಪಕ ವಿದ್ಯುತ್ ಒದಗಿಸುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ತಿಳಿಸಿದರು.