Friday, August 14, 2026
Friday, August 14, 2026

Navaratri ನವರಾತ್ರಿ ಮೊದಲ ದಿನ: ದೇವಿಯ ಶೈಲಪುತ್ರಿ ರೂಪದ ಆರಾಧನೆ

Date:

Navaratri ನವರಾತ್ರಿ(ಮೊದಲನೆಯದಿನ):

“ವಂದೇ ವಾಂಛಿತ ಲಾಭಾಯ
ಚಂದ್ರಾರ್ಧಕೃತಶೇಖರಂ/
ವೃಷಾರೂಢಂ ಶೂಲಧರಾಂ
ಶೈಲಪುತ್ರೀಂ ಯಶಸ್ವಿನೀಂ//

ಶರನ್ನವರಾತ್ರಿ ಹಬ್ಬದ ಮೊದಲನೆಯ ದಿನ.
ಈ ದಿನ ದುರ್ಗಾಮಾತೆಯನ್ನು ಶೈಲಪುತ್ರಿದೇವಿ ಎಂಬ
ರೂಪದಿಂದ ಆರಾಧಿಸಲಾಗುತ್ತದೆ.

ಹಳದಿ ಬಣ್ಣಕ್ಕೆ ವಿಶೇಷ ಮಹತ್ವ.
ದೇವಿಯು ಕೈಯಲ್ಲಿ ತ್ರಿಶೂಲ ಮತ್ತು ಕಮಲವನ್ನು ಹಿಡಿದು ಎತ್ತನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ.

ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ಈಕೆ
ಯನ್ನು ಶೈಲಪುತ್ರಿ ಎಂದು ಕರೆಯುತ್ತಾರೆ.ಸುಂದರ
ಮತ್ತು ಸೌಮ್ಯ ರೂಪ ಶೈಲ ಪುತ್ರಿ ದೇವಿಯದು.
ಶಿವ ಪುರಾಣದ ಪ್ರಕಾರ,ಸತಿದೇವಿ ದಕ್ಷಪ್ರಜಾಪತಿಯ
ಯಜ್ಞಕುಂಡಕ್ಕೆ ಹಾರಿ ಮುಂದಿನ ಜನ್ಮದಲ್ಲಿ ಶೈಲರಾಜ
ಹಿಮವಂತನಿಗೆ ಮಗಳಾಗಿ ಜನಿಸಿ ಶೈಲಪುತ್ರಿ ಎಂದು
ಹೆಸರು ಪಡೆದಳು. ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ಮದುವೆಯಾದಳು.ಅಸುರರಿಂದ ತೊಂದರೆ ಅನುಭವಿಸುತ್ತಿದ್ದ ದೇವಾನುದೇವತೆಗಳಿಗೆ
ಅಭಯ ಹಸ್ತ ನೀಡಿದವಳೇ ಶೈಲಪುತ್ರಿದೇವಿ.

Navaratri ನವರಾತ್ರಿ ಹಬ್ಬದ ಮೊದಲನೆಯ ದಿನ ಶೈಲಪುತ್ರಿದೇವಿಯನ್ನು ಶ್ರದ್ಧಾ,ಭಕ್ತಿಯಿಂದ ಆರಾಧಿಸಿದರೆ ದೇವಿಯು ಭಕ್ತರಿಗೆ ವಿಶೇಷ ಶಕ್ತಿಯನ್ನು
ಕರುಣಿಸುತ್ತಾಳೆ ಎಂಬ ದೃಢವಾದ ನಂಬಿಕೆ ಇದೆ.
ಇಂತಹ ಅಭಯಕೊಟ್ಟು ಕಾಪಾಡುವ ಶೈಲಪುತ್ರಿ
ದೇವಿಯನ್ನು ನಾವು ಭಕ್ತಿಯಿಂದ ಆರಾಧಿಸಿ,ಪೂಜೆ
ಸಲ್ಲಿಸಿ,ತಾಯಿಯ ಅನುಗ್ರಹವನ್ನು ಪಡೆಯೋಣ.

ಲೇಖಕ: ಎನ್.ಜಯಭೀಮ ಜೊಯಿಸ್,
ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...