Saturday, October 17, 2026
Saturday, October 17, 2026

Swachh Bharat Abhiyan ಸ್ವಚ್ಛ ಭಾರತ ಅಭಿಯಾನ ಎಲ್ಲರಿಗೂ ಮಾದರಿ-ಪ್ರೊ.ಎಸ್.ವೆಂಕಟೇಶ್

Date:

Swachh Bharat Abhiyan ಗಾಂಧಿ ಜಯಂತಿಯ ಅಂಗವಾಗಿ ಭಾರತ ಸರ್ಕಾರದ ‘ಏಕ್ ತಾರೀಖ್ ಏಕ್ ಘಂಟಾ’ ಸ್ವಚ್ಛತಾ ಅಭಿಯಾನ ಇಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯಿತು.

ಗಾಂಧಿ ಜಯಂತಿಯ ಮುನ್ನಾ ದಿನವಾದ ಇಂದು ಬೆಳಿಗ್ಗೆ 10 ಗಂಟೆಯಿಂದ 11ರವರೆಗೆ ‘ಸ್ವಚ್ಛತೆಯೇ ಸೇವೇ’ ಶೀರ್ಷಿಕೆಯಡಿ
ಸುಮಾರು 1500 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ‌ಆವರಣದಾದ್ಯಂತ ಪ್ಲಾಸ್ಟಿಕ್, ಕಸ, ಮತ್ತು ಇತರೆ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

Swachh Bharat Abhiyan ಕುಲಪತಿ ಪ್ರೊ. ಎಸ್. ವೆಂಕಟೇಶ್ ಮಾತನಾಡಿ, ಗಾಂಧೀಜಿ ಗ್ರಾಮ‌ ಸ್ವರಾಜ್ಯ ಪರಿಕಲ್ಪನೆಯಡಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂಬ ತತ್ವ ಪ್ರತಿಪಾದಿಸಿದ್ದರು. ಅವರ ಆದರ್ಶಪ್ರಾಯ ಮಾರ್ಗದಲ್ಲಿ ಸಾಗುತ್ತಿರುವ ಸ್ವಚ್ಛ ಭಾರತ ಅಭಿಯಾನ ಎಲ್ಲರಿಗೂ ಮಾದರಿ ಎಂದರು.

ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆಯಾ ಕಟ್ಟಡಗಳ ಸುತ್ತುಮುತ್ತಲಿನ ಆವರಣವನ್ನು ಸ್ಚಚ್ಛಗೊಳಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್. ಡಿ. ವಿರೂಪಾಕ್ಷ, ಪ್ರೊ. ಬಿ. ತಿಪ್ಪೇಸ್ವಾಮಿ, ಪ್ರೊ. ವೆಂಕಟೇಶ, ಪ್ರೊ. ಗಿರೀಶ್, ಡಾ. ಧರಣಿಕುಮಾರ್, ಡಾ. ಸತ್ಯಪ್ರಕಾಶ್, ಡಾ. ಗಜಾನನ ಪ್ರಭು, ವಿವಿಧ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...