Asian Games ಚೈನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರು ಮಿಶ್ರ ಡಬಲ್ಸ್ ಟೆನಿಸ್ ಫೈನಲ್‌ನಲ್ಲಿ ಚಿನ್ನ ಗೆದ್ದಿದ್ದಾರೆ.
Asian Games ಹ್ಯಾಂಗ್‌ಝೌ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಭಾರತದ ಈ ಡೈನಾಮಿಕ್ ಜೋಡಿ 2-6, 6-3, 10-4 ಅಂಕಗಳೊಂದಿಗೆ ತೈವಾನ್ ಜೋಡಿಯಾದ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ವಿರುದ್ಧ ಜಯಗಳಿಸಿ ಈ ಸಾಧನೆ ಮಾಡಿದೆ.
1 ಗಂಟೆ 14 ನಿಮಿಷಗಳ ರೋಚಕ ಸ್ಪರ್ಧೆಯಲ್ಲಿ ಭಾರತದ ಜೋಡಿ ಟೈ ಬ್ರೇಕರ್‌ನಲ್ಲಿ ಪ್ರಾಬಲ್ಯ ಮೆರೆದರು. ಅಂತಿಮವಾಗಿ 10-4 ಗೆಲುವು ಸಾಧಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
