Tuesday, March 31, 2026
Tuesday, March 31, 2026

ಮ್ಯಾನ್ಮಾರ್ ಸಾಂಗ್ ಸೂಕಿ: ಸೆರೆವಾಸ ಶಿಕ್ಷೆ.

Date:

ಮ್ಯಾನ್ಮಾರ್ ನಾಗರಿಕ ಹೋರಾಟಗಳ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಮ್ಯಾನ್ಮಾರ್ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕೊರೋನಾ ನಿಯಮ ಉಲ್ಲಂಘನೆ ಮತ್ತು ಶಾಂತಿಗೆ ಭಂಗ ಉಂಟುಮಾಡಿದ್ದಾರೆ ಎಂಬ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಮ್ಯಾನ್ಮಾರ್ ನಲ್ಲಿ ನಡೆದ ಸೇನಾ ದಂಗೆಯ ಬಳಿಕ 76 ವರ್ಷದ ಸೂಕಿ ಅವರನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಕೊರೋನಾ ನಿಯಮ ಉಲ್ಲಂಘನೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗ ತಂದಿರುವ ಹಾಗೂ ಆರೋಪಗಳು ಇನ್ನು ಹಲವು ಆರೋಪಗಳು ಅವರ ಮೇಲಿವೆ. ಈ ಆರೋಪಗಳ ಸಾಲಿನಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಪ್ರಸ್ತುತ ತೀರ್ಪು ಹೊರಬಿದ್ದಿದೆ. ಇನ್ನುಳಿದದ್ದೆಲ್ಲಾ ಪ್ರಕರಣಗಳಲ್ಲಿ ತಪ್ಪು ಸಾಬೀತಾದರೆ, ನೂರು ವರ್ಷಗಳಿಗೂ ಅಧಿಕ ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಸೂಕಿ ಅವರನ್ನು ಕಾರಾಗೃಹಕ್ಕೆ ಕಳುಹಿಸಲಾಗುವುದು ಅಥವಾ ಗೃಹ ಬಂಧನದಲ್ಲಿ ಇರಿಸಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ನ್ಯಾಯಾಲಯ ಏನನ್ನೂ ಹೇಳಿಲ್ಲ. ಈ ಹಿಂದೆ ಪ್ರಜಾಪ್ರಭುತ್ವ ಪರ ಹೋರಾಟ ನಡೆಸಿದ ಸೂಕಿ ಅವರನ್ನು 1989ರಲ್ಲಿ 15 ವರ್ಷಗಳ ಕಾಲ ಗೃಹಬಂಧನದಲ್ಲಿರಿಸಲಾಗಿತ್ತು.

ಸೂಕಿ ಅವರಿಗೆ ಶಿಕ್ಷೆ ವಿಧಿಸಿರುವುದನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು ಇನ್ನು ಕೆಲವು ನಾಯಕರು ಇದನ್ನು ಖಂಡಿಸಿದ್ದಾರೆ. ಸೂಕಿ ಅವರ ವಿರುದ್ಧ ಆರೋಪಗಳು ಮತ್ತು ತೀರ್ಪು ಎರಡೂ ವಂಚನೆಯಿಂದ ಕೂಡಿವೆ. ಮ್ಯಾನ್ಮಾರ್ ನ್ಯಾಯಾಂಗವು ಅಲ್ಲಿನ ಮಿಲಿಟರಿ ಪ್ರಾಬಲ್ಯದ ಸರಕಾರದ ಕೈಗೊಂಬೆಯಾಗಿದೆ.ವಿಚಾರಣೆ ನ್ಯಾಯೋಚಿತವಾಗಿ ನಡೆದಿಲ್ಲ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮಾಜಿ ಅಧಿಕಾರಿ ಯಾಂಘೀ ಲೀ ಅವರು ಹೇಳಿದ್ದಾರೆ. ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸೇರಿದಂತೆ ಇತರೆ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಈ ತೀರ್ಪನ್ನು ಖಂಡಿಸಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Keladi Shivappa Nayaka Agriculture University ಏಪ್ರಿಲ್ 8 ರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲಿ ವಿವಿಧ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ.

Keladi Shivappa Nayaka Agriculture University ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಏಪ್ರಿಲ್...

Shivamogga Police ಏಪ್ರಿಲ್ 6. ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ವಾಹನಗಳ ಬಹಿರಂಗ ಹರಾಜು.

Shivamogga Police ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ 08...

Breaking News ಸಿಡಿಲು ಬಡಿದು ಶಿವಮೊಗ್ಗ ಸನಿಹದ ರಾಮನಗರದಲ್ಲಿ ಚಿಕನ್ ಅಂಗಡಿ ಮಾಲೀಕರ ಸಾವು.

Breaking News ಸಿಡಿಲು ಬಡಿದು ಚಿಕನ್ ಅಂಗಡಿಯ ಮಾಲೀಕ ಸಾವನಪ್ಪಿದ್ದಾನೆ. ಸೋಮವಾರ...

Madhu Bangarappa ಸೊರಬದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಗಳನ್ನವಿತರಿಸಿದ ಸಚಿವ ಮಧು ಬಂಗಾರಪ್ಪ.

Madhu Bangarappa  ಮಧು ಬಂಗಾರಪ್ಪನವರ ಮತಕ್ಷೇತ್ರ ಸೊರಬ ಜನತೆಯ ಸುರಕ್ಷತೆ ಹಾಗೂ...