ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ‘ ಓಮಿಕ್ರಾನ್’ ಭಾರತ ಸೇರಿದಂತೆ ಯಾವುದೇ ದೇಶದಲ್ಲಿರುವ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವೈರಾಣು ತಜ್ಞರು ಹೇಳಿದ್ದಾರೆ.
ಭಾರತ ಮಾತ್ರವಲ್ಲ, ಜಗತ್ತಿನ ಯಾವ ದೇಶದ ಮಕ್ಕಳಿಗೂ ಓಮಿಕ್ರಾನ್ ಬಾಧಿಸುವ ಸಾಧ್ಯತೆ ಇಲ್ಲ.ಅಷ್ಟಕ್ಕೂ, ಮಕ್ಕಳ ಮೇಲೆ ಹೊಸ ರೂಪದಲ್ಲಿ ಪರಿಣಾಮ ಬೀರುತ್ತದೆ ಎಂದು ಅಷ್ಟು ಬೇಗ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ ಎಂದು ರಾಷ್ಟ್ರೀಯ ಜೈವಿಕ ವೈದ್ಯಕೀಯ ಜಿನೋಮಿಕ್ಸ್ ಸಂಸ್ಥೆ ನಿರ್ದೇಶಕ ಡಾ. ಸೌಮಿತ್ರ ದಾಸ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಕರಣಗಳ ಹೆಚ್ಚಳ, ಓಮಿಕ್ರಾನ್ ರೂಪಾಂತರಿ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಪಡೆದು ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. 2 ಡೋಸ್ ಲಸಿಕೆ ತೆಗೆದುಕೊಂಡವರಲ್ಲಿ ಓಮಿಕ್ರಾನ್ ಸೋಂಕಿನ ತೀವ್ರತೆ ಇರುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.
ಕೊರೊನಾ ವೈರಾಣುವಿನ ಪರಿಣಾಮವು ವ್ಯಕ್ತಿಯ ದೇಹದಲ್ಲಿರುವ ರೋಗನಿರೋಧಕ ಶಕ್ತಿ, ಆಹಾರ ಪದ್ಧತಿ, ಇದಕ್ಕೂ ಮೊದಲು ದೇಹದ ಮೇಲೆ ಪರಿಣಾಮ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಅದರಲ್ಲೂ , ಓಮಿಕ್ರಾನ್ ಬೇರೆ ದೇಶದ ಜನರಿಗೆ ಬೀರಿದ ಪರಿಣಾಮವೇ ಭಾರತೀಯರ ಮೇಲು ಬೀರುತ್ತಿದೆ ಎಂಬುದು ಕೇವಲ ವದಂತಿ. ಕೊರೊನಾ ನಿರೋಧಕ ಲಸಿಕೆ 2 ಡೋಸ್ ಪಡೆಯುವುದು, ಸಾಮಾಜಿಕ ಅಂತರ ಸೇರಿ ಹಲವು ಮುಂಜಾಗೃತಾ ಕ್ರಮ ತೆಗೆದುಕೊಂಡರೆ ಸಾಕು. ಅನವಶ್ಯಕ ಭೀತಿಗೆ ಒಳಗಾಗುವುದು ಬೇಡ ಎಂದು ರಾಷ್ಟ್ರೀಯ ಜೈವಿಕ ವೈದ್ಯಕೀಯ ಜಿನೋಮಿಕ್ಸ್ ಸಂಸ್ಥೆ ತಿಳಿಸಿದೆ.
ಓಮಿಕ್ರಾನ್ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ
Date: