Saturday, October 10, 2026
Saturday, October 10, 2026

JCI Shivamogga ಜೆಸಿಐ ಶಿವಮೊಗ್ಗ ಭಾವನಾ ಆಶ್ರಯದಲ್ಲಿ ರಕ್ತ,ನೇತ್ರ ಹಾಗು ದೇಹದಾನ ಶಿಬಿರ

Date:

JCI Shivamogga ಜೆಸಿಐ ಶಿವಮೊಗ್ಗ ಭಾವನದ ವತಿಯಿಂದ, ಶಂಕರ ಕಣ್ಣಿನ ಆಸ್ಪತ್ರೆ, ಸಂಜೀವಿನಿ ಬ್ಲಡ್ ಬ್ಯಾಂಕ್ ಹಾಗೂ ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಸಹಕಾರದೊಂದಿಗೆ ಮಥುರಾ ಪ್ಯಾರಡೈಸ್ ಎದುರಲ್ಲಿರುವ ಪ್ರವಾಸಿ ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಗೆ ರಕ್ತದಾನ ಶಿಬಿರ, ನೇತದಾನ ಶಿಬಿರ ಹಾಗೂ ದೇಹ ದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ 200 ಕ್ಕೂ ಅಧಿಕ ಜನರು ಪಾಲ್ಗೊಂಡು ರಕ್ತದಾನ,ಕಣ್ಣಿನ ದಾನ, ದೇಹ ದಾನವನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದರ ಮೂಲಕ ಜೀವ ಉಳಿಸುವ ಹಾಗೂ ಇನ್ನೊಬ್ಬರಿಗೆ ಆರೋಗ್ಯವನ್ನು ಕೊಡುವ ರೀತಿಯಲ್ಲಿ ಸಮಾಜ ಸೇವೆಯನ್ನು ಮತ್ತಷ್ಟು ಹೆಚ್ಚು ಮಾಡುವ ಪ್ರತಿಜ್ಞೆ ಮಾಡಿದರು.

JCI Shivamogga ಜೆ ಸಿ ಐ ಶಿವಮೊಗ್ಗದ ಅಧ್ಯಕ್ಷೆ ಪೂರ್ಣಿಮಾ ಸುನಿಲ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೆಸಿಐನ ಅನುಷ್ ಗೌಡ, ಕೋ ಆರ್ಡಿನೇಟರ್ ಜೆಸಿ ಪ್ರದೀಪ್ ಶಂಕರ್ ಕಣ್ಣಿನ ಆಸ್ಪತ್ರೆಯ ಡಾಕ್ಟರ್ ವಿಶ್ವಾಸ್, ಸಂಜೀವಿನಿ ಬ್ಲಡ್ ಬ್ಯಾಂಕ್ ನ ದಿನಕರ್, ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಡಾಕ್ಟರ್ ರೇಖಾ, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ರಾಘವೇಂದ್ರ, ಅವರು ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸುಧೀರ್ ಮಲ್ಯ ಅರುಣ್ ಕುಮಾರ್ ಅವರು ದೇಹ ದಾನ ಮಾಡಿದ್ದು ತುಂಬಾ ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...