Sunday, May 17, 2026
Sunday, May 17, 2026

Congress Karnataka ಗ್ಯಾರಂಟಿಗಳ ಬಗ್ಗೆ ಬಿಜೆಪಿ,ಜೆಡಿಎಸ್ ಆರೋಪಗಳಲ್ಲಿ ಹುರುಳಿಲ್ಲ- ಸಿ.ಎನ್.ಅಕ್ಮಲ್

Date:

Congress Karnataka ಸಾರ್ವಜನಿಕರ ತೆರಿಗೆ ಹಣವನ್ನು ಸಾರ್ವಜನಿಕವಾಗಿ ಬಳಕೆಯಾಗುತ್ತಿದ್ದರೂ ವಿರೋಧ ಪಕ್ಷದ ಮುಖಂಡರುಗಳು ಕಾಂಗ್ರೆಸ್ ಭ್ರಷ್ಟಚಾರ ಆರೋಪವೆಸಗುತ್ತಿದೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಾ ನಾಟಕವಾಡುತ್ತಿದೆ ಎಂದು ಕಾಂಗ್ರೆಸ್ ಕಿಸಾನ್ ಸೆಲ್ ರಾಜ್ಯ ಕಾರ್ಯದರ್ಶಿ ಸಿ.ಎನ್.ಅಕ್ಮಲ್ ಆರೋಪಿ ಸಿದ್ದಾರೆ.

ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಗಳ ಆರೋಪಗಳಲ್ಲಿ ಹುರುಳಿಲ್ಲ. ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿ ಸುವ ಕಾರ್ಯದಲ್ಲಿ ರಾಜ್ಯಸರ್ಕಾರ ತೊಡಗಿದೆ. ಇದನ್ನು ಅರ್ಥಮಾಡಿಕೊಳ್ಳದ ವಿರೋಧ ಪಕ್ಷದವರು ಸುಖಸುಮ್ಮ ನೆ ತೆರಿಗೆ ಹಣ ಪೋಲಾಗುತ್ತಿದೆ, ಲಂಚ ಹೆಚ್ಚಾಗಿದೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

Congress Karnataka ಈಗಾಗಲೇ ವಿರೋಧ ಪಕ್ಷದ ಶಾಸಕರುಗಳು ಚುನಾವಣಾ ಸಮಯದಲ್ಲಿ ಕೋಟಿಗಳಲ್ಲೇ ಆಸ್ತಿ ಹೊಂದಿರು ವುದಾಗಿ ತಿಳಿಸಿದ್ದಾರೆ. ಎರಡು ದಶಕಗಳ ಹಿಂದೆ ಶಾಸಕರ ಸ್ಥಿತಿ ಏನಾಗಿತ್ತು, ಇದೀಗ ಯಾವ ಸ್ಥಾನದಲ್ಲಿದ್ದಾರೆ ಎಂ ಬುದನ್ನು ಅರಿಯಬೇಕು. ಇದನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳ ವಿಷಯ ದಲ್ಲೂ ಬೆಣ್ಣೆಯಲ್ಲಿ ಕಲ್ಲುಡುಕುವ ಕೆಲಸ ಮಾಡಬಾರದು ಎಂದಿದ್ದಾರೆ.
ಜೆಡಿಎಸ್ ಮುಖಂಡರುಗಳಿಗೆ ಕೇಳುವುದೇನೆಂದರೆ ನಿಮ್ಮ ಸರ್ಕಾರವಿದ್ಧಾಗ ರೈತರ ಸಾಲ ಮನ್ನಾ ಮಾಡುವು ದಾಗಿ ಒಂದೂವರೆ ವರ್ಷಗಳ ಕಾಲ ಕಣ್ಣಿರಿಡುತ್ತಾ ಕಾಲಹರಣ ಮಾಡಿರುವುದು ಸರಿಯೇ. ಕಾಂಗ್ರೆಸ್ ಜನರಿಗೆ ನುಡಿದಂತೆ ನಡೆಯುತ್ತಿರುವುದು ಸರಿಯೇ ಎಂಬುದನ್ನು ರಾಜ್ಯದ ಜನತೆ ಅರಿತಿದ್ದಾರೆ ಎಂದು ಹೇಳಿದ್ದಾರೆ.

ಜನಪರವಾಗಿ ಹಲವಾರು ಯೋಜನೆಗಳನ್ನು ತಂದೊಡ್ಡುವ ಮೂಲಕ ಉತ್ತಮ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ರಾಜ್ಯದ ಮಾದರಿಯಲ್ಲೇ ಲೋಕಸಭಾ ಚುನಾವಣೆಯಲ್ಲೂ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...