Wednesday, May 13, 2026
Wednesday, May 13, 2026

Bagar Hukum Land ಬಗರ್ ಹುಕುಂ ರೈತರ ಬಗ್ಗೆ ಶಾಸಕ ವಿಜಯೇಂದ್ರ ಅವರದ್ದು ಮೊಸಳೆ ಕಣ್ಣೀರು-ರಾಜ್ಯ ಯುವ ಕಾಂಗ್ರೆಸ್

Date:

Bagar Hukum Land ಬಗರ್ ಹುಕುಂ ರೈತರ ಬಗ್ಗೆ ಶಾಸಕ ಬಿ.ವೈ. ವಿಜಯೇಂದ್ರ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಚೇತನ್ ವ್ಯಂಗ್ಯವಾಡಿದ್ದಾರೆ.
ಬುಧವಾರ ಸದನದಲ್ಲಿ ಮಾತನಾಡಿರುವ ವಿಜಯೇಂದ್ರ ಅವರು, ಬಗರ್ ಹುಕುಂ ರೈತರಿಗೆ ಅಧಿಕಾರಿಗಳು ನೋಟೀಸ್ ಕೊಡುತ್ತಿದ್ದಾರೆ. ರೈತರ ಸಮಸ್ಯೆ ಬಗೆಹರಿಯುತ್ತಿಲ್ಲ. ಮೂರುತಲೆಮಾರಿನ ದಾಖಲೆಗಳನ್ನು ಕೇಳುತ್ತಿದ್ದಾರೆ. ಇದೆಲ್ಲಾ ರೈತವಿರೋಧಿ ನೀತಿಯಾಗಿದೆ ಎಂದಿದ್ದಾರೆ.

ವಿಜಯೇಂದ್ರ ಅವರು ಈಗ ಶಾಸಕರಾದ ಕೂಡಲೇ ಬಗರ್‍ಹುಕುಂ ರೈತರ ಬಗ್ಗೆ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದಿದ್ದಾರೆ.

ವಿಜಯೇಂದ್ರ ಅವರ ತಂದೆ ಬಿ.ಎಸ್. ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ರೈತಪರ ಹೋರಾಟಗಳ ಮೂಲಕವೇ ರಾಜಕೀಯವಾಗಿ ಬೆಳೆದ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಗರ್‍ಹುಕುಂ ರೈತರ ಸಮಸ್ಯೆ ಬಗೆಹರಿಸಲಿಲ್ಲ. ಅವರ ಅಣ್ಣ ಬಿ.ವೈ. ರಾಘವೇಂದ್ರ ಅವರು 3 ಬಾರಿ ಸಂಸದರಾಗಿದ್ದಾರೆ.

Bagar Hukum Land ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಬಗರ್‍ಹುಕುಂ ರೈತರ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಈಗ ಸದನದಲ್ಲಿ ಬಗರ್ ಹುಕುಂ ರೈತರ ಬಗ್ಗೆ ಮಾತನಾಡುತ್ತಿದ್ದಾರೆ.
ತಮಗೆ ಅಧಿಕಾರ ಇದ್ದಾಗ ರೈತರ ಬಗ್ಗೆ ಕಾಳಜಿ ತೋರಿಸದ ವಿಜಯೇಂದ್ರ ಅವರಿಗೆ ಈಗ ರೈತರ ಬಗ್ಗೆ ಕಾಳಜಿ ಉಂಟಾಗಿದೆ. ಈ ರೀತಿ ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸುವುದು ಬಿಟ್ಟು, ತಮ್ಮ ಸಹೋದರ ಬಿ.ವೈ. ರಾಘವೇಂದ್ರ ಹಾಗೂ ತಂದೆ ಬಿ.ಎಸ್. ಯಡಿಯೂರಪ್ಪನವರ ಪ್ರಭಾವ ಬಳಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಿ ಎಂದು ಕೆ. ಚೇತನ್ ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯಲ್ಲಿ ನಾಳೆಯಿಂದ ‘ಮಾನವ-ವನ್ಯಜೀವಿ ಸಂಘರ್ಷ’ ಕುರಿತು ರಾಷ್ಟ್ರೀಯ ಸಮ್ಮೇಳನ

Kuvempu University ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ...

Karnataka Sanga ಕರ್ನಾಟಕ ಸಂಘದಲ್ಲಿ ಇಬ್ಬರು ಹಿರಿಯ ಮಹನೀಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Karnataka Sanga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಮೇ 2026ರ...

ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 𝗠𝗲𝘁𝗿𝗼 𝗖𝗼𝗮𝗰𝗵 ಗಳ ಖರೀದಿಗೆ 𝗜𝗖𝗙 ಜೊತೆ ಒಪ್ಪಂದ, ₹𝟭,𝟱𝟭𝟯.𝟳𝟱 ಕೋಟಿ ಮೊತ್ತದ ಕಾರ್ಯಾದೇಶ

ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ...