Wednesday, September 16, 2026
Wednesday, September 16, 2026

Thirthahalli to Haralimata Road ತೀರ್ಥಹಳ್ಳಿಯ ಕುರುವಳಿ ಟು ಹರಳಿಮಠ ರಸ್ತೆ ಕೆಸರುಮಯ: ಓಡಾಟಕ್ಕೆ ದುಸ್ಸಾಹಸ

Date:

Thirthahalli to Haralimata Road : ಓಡಾಟಕ್ಕೆ ದುಸ್ಸಾಹಸ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುವಳ್ಳಿಯಿಂದ ಹರಳಿಮಠ ಹೊಗುವ ರಸ್ತೆಯ ಕೊಮನೆ ಬಸ್ ನಿಲ್ದಾಣ ಎದುರು ಅರಣ್ಯ ಇಲಾಖೆ ಅಧಿಕಾರಿಗಳ ಬೆಜಾವಬ್ದಾರಿಯಿಂದ ರಸ್ತೆ ಸಂಪೂರ್ಣ ಕೆಸರು ಮಯವಾಗಿದೆ.

ಈ ಭಾಗದ ಅನೇಕ ಸಾರ್ವಜನಿಕರು, ರೈತರು, ಶಾಲಾ ಮಕ್ಕಳು, ವಯೋವೃದ್ದರು ಈ ಮಾರ್ಗದಲ್ಲಿ ಪಟ್ಟಣಕ್ಕೆ ನಿತ್ಯ ಹೋಗಲು ಬರಲು ಇರುವುದು ಇದೊಂದೆ ಮಾರ್ಗವಾಗಿದ್ದು ಈಗಾಗಲೇ ಈ ಟಾರ್ ರಸ್ತೆ ಈಗ ಕೆಸರಿನ ರಸ್ತೆಯಾಗಿ ಮಾರ್ಪಟ್ಟಿದೆ. ಎರಡು ಮೂರುಜನ ಬೈಕ್ ಸವಾರರು ರಸ್ತೆಯಲ್ಲಿ ಬಿದ್ದ ಘಟನೆ ಕೂಡ ನಡೆದಿದೆ.

ಟಾರ್ ರಸ್ತೆ ಈಗ ಕೆಸರು ರಸ್ತೆಯಾದರು ಕೂಡ ಸಾರ್ವಜನಿಕರು ಕೆಸರಲ್ಲೆ ಓಡಾಡಿದರು ಕೂಡ
ಸಂಬಂಧ ಪಟ್ಟ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ ಎಂಬ ಮಾತು ಅ ಭಾಗದ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ದಿನನಿತ್ಯ ನೂರಾರು ಸಾರ್ವಜನಿಕರು, ನೂರಾರು ವಾಹನಗಳು ಸಂಚರಿಸುವ ರಸ್ತೆಯ ಈ ಅವ್ಯವಸ್ಥೆ ಎರಡು ವರ್ಷಗಳಿಂದ ಮುಂದುವರೆಯುತ್ತಿದೆ.

Thirthahalli to Haralimata Road : ಓಡಾಟಕ್ಕೆ ದುಸ್ಸಾಹಸ ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಗ್ರಾಮದ ಕೆಸರುಗದ್ದೆ ರಸ್ತೆ ಕಡೆ ಗಮನಹರಿಸಿ ಸಾರ್ವಜನಿಕರಿಗೆ ಆಗುವ ಸಮಸ್ಯೆಯನ್ನು ಬಗೆಹರಿಸಿ ವಾಹನ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಬಿಜೆಪಿ ಮುಖಂಡರಾದ ಮುನ್ನೂರು ರಾಮಚಂದ್ರ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...