Saturday, May 23, 2026
Saturday, May 23, 2026

Catanabidu School ಕ್ಯಾತನಬೀಡು ಶಾಲೆಯಲ್ಲಿ ಉಚಿತ ಪುಸ್ತಕ,ಲೇಖನಿ ಸಾಮಗ್ರಿ ವಿತರಣೆ

Date:

Catanabidu School ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ದಿ. ಮಧುಕರ್‌ಶೆಟ್ಟಿ ಸ್ಮರಣಾರ್ಥವಾಗಿ ತಾಲ್ಲೂಕಿನ ಕ್ಯಾತನಬೀಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ. ಕೆ.ಮಧುಕರ್‌ಶೆಟ್ಟಿ ಯುವಬಳಗದಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಲಿತ ಜನಸೇನೆಯ ಜಿಲ್ಲಾಧ್ಯಕ್ಷ ಅನಿಲ್‌ಆನಂದ್ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ದಿ. ಮಧುಕರ್‌ಶೆಟ್ಟಿಯವರು ಕಾರ್ಯನಿರ್ವಹಿಸಿದ ಸಮ ಯದಲ್ಲಿ ತೆಗೆದುಕೊಂಡ ನಿರ್ಧಾರ, ಬಡವರ ಪರ ಕಾಳಜಿಯೇ ಜನಸೇವೆಯಲ್ಲಿ ತೊಡಗಲು ಕಾರಣ ಎಂದರು.
ಒಂದು ಗ್ರಾಮಕ್ಕೆ ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕರಣ ಮಾಡಿ ಬಡವರಿಗೆ ಭೂಮಿ ನೀಡಿದವರು. ಅವರ ಹೆಸರಿನಲ್ಲಿ ಯುವಕರ ತಂಡ ಜನಸೇವೆಗೆ ಸದಾ ಸಿದ್ಧರಾಗಿರುವಂತೆ ಪ್ರೇರಣೆಯಾಗಿರುವುದು ಸಾಕ್ಷಿ ಎಂದು ಹೇಳಿದರು.

ಡಾ. ಕೆ.ಮಧುಕರ್‌ಶೆಟ್ಟಿ ಯುವ ಬಳಗದ ಅಧ್ಯಕ್ಷ ಚೌಡಪ್ಪ ಮಾತನಾಡಿ ಒಬ್ಬ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಸಂಘ ಸ್ಥಾಪಿಸಿ ಅವರ ನೆನಪಾರ್ಥ ಸಾರ್ವಜನಿಕ ಸೇವೆ ಹಮ್ಮಿಕೊಳ್ಳಲು ಮುಖ್ಯ ಕಾರಣ ಅವರಲ್ಲಿದ್ದ ನಿಸ್ವಾರ್ಥ ಸೇವೆ ಹಾಗೂ ಬಡವರಿಗೆ ಸದಾ ಮಿಡಿಯುವ ನಿರ್ಮಲ ಮನಸ್ಸು, ಅಂತವರ ಪ್ರೇರಣೆಯಿಂದ ನಾವುಗಳು ಕೂಡ ಕೈಲಾದ ಸಹಾಯವನ್ನು ಮಾಡಲಾಗುತ್ತಿದೆ ಎಂದರು.

ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಂತೋಷ್ ಮಾತನಾಡಿ, ಸರ್ಕಾರಿ ಶಾಲೆಗಳು ಇಂದು ಎಲ್ಲಾ ಮಟ್ಟದಲ್ಲೂ ಉತ್ತಮವಾಗಿದ್ದು ಪೋಷಕರು ಕೂಡ ಸರ್ಕಾರಿ ಶಾಲೆಯತ್ತ ಗಮನಹರಿಸಿದರೆ ಮಕ್ಕಳು ಕೂಡ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಾಧನೆ ಮಾಡಬಹುದು ಎಂದರು.

Catanabidu School ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್, ಡಾ.ಮಧುಕರ್ ಶೆಟ್ಟಿ ಯುವ ಬಳಗದ ಗುಣ, ಪ್ರಶಾಂತ್, ಮೋಹನ್, ಭೂಮಿಕಾ ಟಿವಿ ತಿಲಕ್, ರೋಹಿತ್, ಶಿಕ್ಷಕರಾದ ಜಯಣ್ಣ, ಸವಿತ ಗ್ರಾಮಸ್ಥರಾದ ಪರಮೇಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ತಾತ್ಕಾಲಿಕ ನೇರ ನೇಮಕಾತಿ ಮೂಲಕಖಾಯಂ ಶಿಕ್ಷಕರ ನೇಮಕಾತಿವರೆಗೆ ಅತಿಥಿ ಶಿಕ್ಷಕರ ನೇಮಕ

Shimoga News 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು...

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...