Wednesday, July 8, 2026
Wednesday, July 8, 2026

Chikmagalur City District Jail ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ಆಲಿಕೆ ಸಹಕಾರಿ- ಎಸ್.ಎಸ್.ಮೇಟಿ

Date:

Chikmagalur City District Jail ಸಂಗೀತಕ್ಕೆ ತನ್ನದೇಯಾದ ಶಕ್ತಿಯಿದೆ. ಮನಸ್ಸಿಗೆ ಆನಂದನ್ನುಂಟು ಮಾಡುವ ಜೊತೆಗೆ ಮಾನಸಿಕ ಒತ್ತಡ ಕಡಿಮೆಯಾಗಿಸಲು ಸಂಗೀತ ಆಲಿಸುವುದು ಸಹಕಾರಿ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಹೇಳಿದರು.

ಚಿಕ್ಕಮಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳಿಗೆ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನದಲ್ಲಿ ಒಮ್ಮೆಯಾದರೂ ಸಂಗೀತದ ಬಗ್ಗೆ ಆಸಕ್ತಿ ಮೂಡಿಸಿದರೆ ದೂರ ಸರಿಯಲ್ಲ ಸಾಧ್ಯವಿಲ್ಲ. ಬದುಕ ನ್ನು ಮುನ್ನೆಡೆಸುವ ಜಾನಪದ, ಶಾಸ್ತ್ರೀಯ ಗೀತೆ ಹಾಗೂ ವಚನಗಳನ್ನು ಪ್ರತಿಯೊಬ್ಬರು ಕೇಳುವ ಮೂಲಕ ಗೀತೆಯ ತತ್ವದ ರೂಪುರೇಷಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಅರ್ಥವಿರದ ಗೀತೆಗಳನ್ನು ನಾಗರೀಕ ಸಮಾಜದಲ್ಲಿದೆ. ಹಿಂದಿನ ಕಾಲದಿಂದ ಕನಕ ದಾಸರು, ಪುರಂದರದಾಸರ ಗೀತೆಗಳು ಹಾಗೂ ಕವಿಗಳು ರಚಿಸಿದಂತೆ ಕೃತಿಯನ್ನು ಗೀತೆಗಳನ್ನಾಗಿ ಮಾಡಿರುವುದು ಇದುವರೆಗೂ ಮರೆಯಲಾಗುವುದಿಲ್ಲ. ಸತ್ಯಹರಿಶ್ಚಂದ್ರನ ಸಿನಿಮಾದ ಕುಲದಲ್ಲಿ ಕೀಳಾವುದು ಗೀತೆ ಇಂದಿಗೂ ಅಜರಾಮರ ಎಂದರು.

ಜೈಲರ್ ಎಂ.ಕೆ.ನೆಲಧರಿ ಮಾತನಾಡಿ ಕಾರಾಬಂಧಿಗಳಿಗೆ ನಿತ್ಯದ ಚಟುವಟಿಕೆಗಳ ನಡುವೆ ಸಂಗೀತ ಕಾರ್ಯ ಕ್ರಮ ಆಯೋಜಿಸಿ ಮನರಂಜನೆ ನೀಡಲಾಗುತ್ತಿದೆ ಎಂದು ಹೇಳಿದರು.

Chikmagalur City District Jail ಗಾಯಕ ಸಾಯಿ ಸತೀಶ್ ಹಲವಾರು ಗೀತೆಗಳನ್ನು ಮೂಡುವ ಮೂಲಕ ಬಂಧಿಗಳಿಗೆ ಮನರಂಜಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಜೈಲರ್ ವನಖಂಡೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...