Sunday, August 9, 2026
Sunday, August 9, 2026

Heavy Rain In Shivamogga  ಶಿವಮೊಗ್ಗ ಜಿಲ್ಲೆಯಲ್ಲಿ ಕುದುರುತ್ತಿರುವ ಮುಂಗಾರು

Date:

Heavy Rain In Shivamogga  ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ಶಿವಮೊಗ್ಗ ಜಿಲ್ಲಾದ್ಯಂತ ಇಂದು ಬೆಳಗ್ಗೆಯಿಂದಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ.

ಮಳೆ ಬಿರುಸುಗೊಂಡಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಭತ್ತ ನಾಟಿ ಮಾಡಲು ಸಸಿ ಮಡಿ ಸಿದ್ಧಪಡಿಸುವುದು, ಗೊಬ್ಬರ ಹಾಕುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.

ಹೊಸನಗರ ತಾಲೂಕಿನ ಮಾಣಿಯಲ್ಲಿ ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ 142 ಮಿಲಿ ಮೀಟರ್ ಅತ್ಯಧಿಕ ಮಳೆ ದಾಖಲಾಗಿದೆ.

ಉಳಿದಂತೆ ಹುಲಿಕಲ್ಲಿನಲ್ಲಿ 127, ಸಾವೆಹಕ್ಲುವಿನಲ್ಲಿ 120, ಚಕ್ರಾನಗರದಲ್ಲಿ 118, ಮಾಸ್ತಿಕಟ್ಟೆಯಲ್ಲಿ 116, ಯಡೂರಿನಲ್ಲಿ 100, ನಗರದಲ್ಲಿ 87 ಮತ್ತು ಹೊಸನಗರದಲ್ಲಿ 48 ಮಿಲಿ ಮೀಟರ್ ಮಳೆ ದಾಖಲಾಗಿದೆ.

Heavy Rain In Shivamogga  1819 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ 1742.65 ಅಡಿ ತಲುಪಿದೆ. ಕಳೆದ ವರ್ಷಕ್ಕಿಂತ 20 ಅಡಿ ನೀರು ಸಂಗ್ರಹ ಕಡಿಮೆ ಇದೆ. ಜಲಾಶಯಕ್ಕೆ 9237 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ತೀರ್ಥಹಳ್ಳಿ ಬಳಿ ಗುಡ್ಡ ಕುಸಿತದಿಂದ ಸಾವಿನ ಅವಘಡ: ಸಚಿವ ಮಧು ಬಂಗಾರಪ್ಪ ಮೌಖಿಕ ಪರಿಶೀಲನೆ, ಪರಿಹಾರಕ್ಕೆ ಶೀಘ್ರ ಕ್ರಮ

Madhu Bangarappa ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ...

Madhu Bangarappa ಗ್ರಾಮೀಣರಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಮನವರಿಕೆ ಮಾಡಿ, ಹೆಚ್ಚಿನ ಜನಕ್ಕೆ ಕೆಲಸ ನೀಡಿ- ಮಧು ಬಂಗಾರಪ್ಪ

Madhu Bangarappa ಬರಗಾಲದ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ...

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...