Friday, March 27, 2026
Friday, March 27, 2026

Blood Donation ಜೀವ ಉಳಿಸುವ ಶ್ರೇಷ್ಠ ಕಾಯಕವೇ ರಕ್ತದಾನ- ಡಾ.ಚನ್ನಬಸವ ಮರುಳ ಸಿದ್ಧಶ್ರೀ

Date:

Blood Donation ದಾನದಿಂದ ಸಿಗುವ ತೃಪ್ತಿಭಾವ ಮತ್ತೆಲ್ಲೂ ಸಿಗುವುದಿಲ್ಲ. ಜೀವ ಉಳಿಸುವ ಶ್ರೇಷ್ಠ ಕಾಯಕ ರಕ್ತದಾನ ಆಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ವಿಶ್ವಗುರು ಬಸವ ಜಯಂತಿ ಪ್ರಯುಕ್ತ ಶಿವಮೊಗ್ಗ ನಗರದ ಬಸವಕೇಂದ್ರದಲ್ಲಿ ಆಯೋಜಿಸಿದ್ದ ರಕ್ತಾಮೃತ ದಾಸೋಹ ಕಾರ್ಯಕ್ರಮಕ್ಕೆ ಸ್ವತಃ ತಾವು ಕೂಡ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ನಾವು ಮಾಡುವ ರಕ್ತದಾನದಿಂದ ತುರ್ತು ಸಂದರ್ಭದಲ್ಲಿ ಇರುವ ಮೂರ‍್ನಾಲ್ಕು ಜನರಿಗೆ ಅನುಕೂಲ ಆಗುತ್ತದೆ. ಮತ್ತೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ನೆರವಾಗುತ್ತದೆ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವು ಚೆನ್ನಾಗಿರಲು ಸಹಕಾರಿ ಆಗುತ್ತದೆ. ಸದಾ ಲವಲವಿಕೆಯಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

Blood Donation ರಕ್ತದಾನ ಬಗ್ಗೆ ಅನೇಕರಲ್ಲಿ ಭಯ ಇದ್ದು, ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆರೋಗ್ಯವಂತ ಯುವಜನರು ವೈದ್ಯರ ಮಾರ್ಗದರ್ಶನದಲ್ಲಿ ರಕ್ತದಾನ ಮಾಡಬಹುದಾಗಿದೆ. ರಕ್ತದ ಕೊರತೆ ಇದ್ದು, ಹೆಚ್ಚು ಹೆಚ್ಚು ರಕ್ತದಾನ ಶಿಬಿರಗಳು ಆಯೋಜನೆ ಆಗಬೇಕು. ಇದರಿಂದ ರಕ್ತದ ಬೇಡಿಕೆ ಪೂರೈಸಬಹುದು ಎಂದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಘಟಕ ಪದಾಧಿಕಾರಿಗಳು, ಬಸವಕೇಂದ್ರದ ಭಕ್ತರು, ವಿವಿಧ ಸಂಘಟನೆ ಸದಸ್ಯರು ರಕ್ತದಾನ ಮಾಡಿದರು. ವಿಶ್ವಗುರು ಬಸವಣ್ಣರಿಗೆ ಪೂಜೆ, ಅಂಬಲಿ ದಾಸೋಹ ನಡೆಯಿತು. ವಿಶ್ವ ಗುರು ಬಸವಣ್ಣ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಬಸವಕೇಂದ್ರದ ವೆಂಕಟೇಶ ನಗರದ ಅನಕೃ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ನಡೆಯಿತು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರ, ಎಚ್.ಸಿ.ಯೋಗೀಶ್, ಎಸ್.ಪಿ.ದಿನೇಶ್, ರುದ್ರಮುನಿ ಸಜ್ಜನ್, ಬಸವಕೇಂದ್ರದ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್‌ಕುಮಾರ್, ನಾಗರಾಜ ಕಂಕಾರಿ, ಮಲ್ಲಿಕಾರ್ಜುನ ಕಾನೂರು, ಡಿ.ನಾಗರಾಜ, ಶಿವಕುಮಾರ, ಧೃವಕುಮಾರ, ಮಹೇಶಮೂರ್ತಿ, ಮಹಾರುದ್ರ, ಬಾರಂದೂರು ಪ್ರಕಾಶ, ಶಿವಯೋಗಿ ಹಂಚಿನಮನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa 2026-27 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಯಲ್ಲಿ 60 ದಿನ ಸಡಿಲಿಕೆ- ಮಧು ಬಂಗಾರಪ್ಪ.

Madhu Bangarappa “ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರು ವರ್ಷ ತುಂಬಿರಲೇಬೇಕು...

MADHU BANGARAPPA ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರೋಧ ಮತ್ತು ‘ಪಾಸ್ ವಿಥೌಟ್ ಹಿಂದಿ’ ಜಾರಿ ಕುರಿತು ಚರ್ಚೆ

MADHU BANGARAPPA ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಮಂತ್ರಿಗಳಾದ ಮಧುಬಂಗಾರಪ್ಪ...

Morarji Desai Residential School ಜಿಲ್ಲೆಯ ಮೊರಾರ್ಜಿ ದೇಸಾಯಿ‌ ವಸತಿ ಶಾಲೆ 6 ನೆ ತರಗತಿಗೆ ಪ್ರವೇಶ ಪರೀಕ್ಷೆ.

Morarji Desai Residential School ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ...

Mylaralingeshwara Temple Shimoga ಮಾರ್ಚ್ 29. ಮೈಲಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Mylaralingeshwara Temple in Shimoga ಶಿವಮೊಗ್ಗ ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ...