Tuesday, May 5, 2026
Tuesday, May 5, 2026

ಯುರೋಪಿನಲ್ಲಿ ಮತ್ತೆ ಕೋವಿಡ್ ಅಲೆ ವಿಶ್ವಸಂಸ್ಥೆಯಿಂದ ಎಚ್ಚರಿಕೆ

Date:

ಯುರೋಪಿನಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೋವಿಡ್-19 ಸೋಂಕಿನ ಮತ್ತೊಂದು ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆಯಂಡ್ ಕಂಟ್ರೋಲ್ ಎಚ್ಚರಿಕೆ ನೀಡಿದೆ.

ಯುರೋಪ್‌ನಲ್ಲಿ ಅಕ್ಟೋಬರ್ 2ಕ್ಕೆ ಅಂತ್ಯಗೊಳ್ಳುವ ವಾರದಲ್ಲಿ ಕೋವಿಡ್ ಸೋಂಕು ಪ್ರಕರಣಗಳಲ್ಲಿ, ಇದಕ್ಕೂ ಹಿಂದಿನ ವಾರಕ್ಕೆ ಹೋಲಿಸಿದರೆ 8% ಹೆಚ್ಚಳವಾಗಿದೆ. ಲಸಿಕೆ ಪಡೆಯುವಲ್ಲಿನ ಹಿಂಜರಿಕೆ ಮತ್ತು ಲಭ್ಯ ಲಸಿಕೆಯ ಕುರಿತ ಗೊಂದಲವು ಈ ವಲಯದಲ್ಲಿ ಬೂಸ್ಟರ್ ಲಸಿಕೆ ಸೇವನೆಯನ್ನು ಮಿತಿಗೊಳಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಯುರೋಪ್‌ನಲ್ಲಿ ಕೋಟ್ಯಾಂತರ ಮಂದಿ ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇಸಿಡಿಸಿ ವರದಿ ಮಾಡಿದ್ದು, ಕಾಲೋಚಿತ ಸಾಂಕ್ರಾಮಿಕ ಶೀತಜ್ವರದ ಪ್ರಕರಣಗಳಲ್ಲಿ ನಿರೀಕ್ಷಿತ ಹೆಚ್ಚಳ ಕಂಡುಬರುವ ಮೊದಲೇ ಜನತೆಗೆ ಫ್ಲೂ ಮತ್ತು ಕೋವಿಡ್-19 ಲಸಿಕೆ ಹಾಕುವಂತೆ ಯುರೋಪಿಯನ್ ದೇಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ.

ಒಂದು ವರ್ಷದ ಹಿಂದೆ ಇದ್ದಂತಹ ಪರಿಸ್ಥಿತಿಯಲ್ಲಿ ಈಗ ನಾವು ಇಲ್ಲದಿದ್ದರೂ, ಕೋವಿಡ್-19 ಸಾಂಕ್ರಾಮಿಕ ಇನ್ನೂ ತೊಲಗಿಲ್ಲ ಎಂಬುದು ಅಷ್ಟೇ ಸ್ಪಷ್ಟವಾಗಿದೆ.

ದುರದೃಷ್ಟವಶಾತ್ ಯುರೋಪ್‌ನಲ್ಲಿ ಮತ್ತೆ ಸೋಂಕು ಉಲ್ಬಣಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು ಇದು ಮತ್ತೊಂದು ಅಲೆಯ ಸಂಕೇತವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ಮತ್ತು ಇಸಿಡಿಸಿಯ ನಿರ್ದೇಶಕಿ ಆಯಂಡ್ರಿಯಾ ಅಮನ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...