Tuesday, October 13, 2026
Tuesday, October 13, 2026

ಹಲವು ವೈವಿಧ್ಯಮಯ ಸಂಗಮದ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್

Date:

ಕರ್ನಾಟಕ ರತ್ನ ಡಾ.ಪುನೀತ್​ ರಾಜ್​ಕುಮಾರ್​ ಅಭಿನಯದ ಗಂಧದ ಗುಡಿ ಪ್ರಿರಿಲೀಸ್ ಇವೆಂಟ್​ಗೆ ದಿನಗಣನೆ ಆರಂಭವಾಗಿದೆ. ಅ.21ರಂದು ಅದ್ದೂರಿಯಾಗಿ ನಡೆಯಲಿರುವ ಪ್ರಿರಿಲೀಸ್ ಇವೆಂಟ್​ನಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಸಮಾಗಮ ಆಗಲಿದೆ.

ಇದೇ ವೇಳೆ ಕರ್ನಾಟಕದಾದ್ಯಂತ ಪುನೀತ್ ಫುಡ್ ಫೆಸ್ಟಿವಲ್ ಕೂಡ ನಡೆಯಲಿದೆ.
ಅ.22 ಮತ್ತು 23ರಂದು ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಟೈಟಲ್​​ನಲ್ಲಿ ಫುಡ್​ ಫೆಸ್ಟಿವಲ್ ನಡೆಯಲಿದೆ. ಅಪ್ಪು ಅವರು ಈ ಹಿಂದೆ ಭೇಟಿ ಕೊಟ್ಟಿದ್ದ ಎಲ್ಲ ಹೋಟೆಲ್​ಗಳಲ್ಲೂ ಫುಡ್ ​ಫೆಸ್ಟಿವಲ್ ನಡೆಯುತ್ತಿದ್ದು, ಅಪ್ಪು ಇಷ್ಟಪಡುತ್ತಿದ್ದ ಎಲ್ಲ ರೀತಿಯ ಆಹಾರ ಸವಿಯಲು ಜನರಿಗೆ ಅವಕಾಶವಿದೆ. ವೆಜ್ ಜತೆಗೆ ನಾನ್​ವೆಜ್​ ಊಟದ ವ್ಯವಸ್ಥೆಯೂ ಇರಲಿದೆ.

ಅಪ್ಪುಗಾಗಿ ಹೋಟೆಲ್​​​​​ ಮಾಲೀಕರು ಫುಡ್​ ಫೆಸ್ಟಿವಲ್ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.
ಕರ್ನಾಟಕದಾದ್ಯಂತ ಫುಡ್ ಫೆಸ್ಟಿವಲ್ ಮಾಡುವ ಕನಸನ್ನು ಅಪ್ಪು ಕಂಡಿದ್ದರಂತೆ. ಅವರ ಕನಸನ್ನು ಈಗ ನನಸು ಮಾಡಲಾಗುತ್ತಿದೆ. ಆ್ಯಂಕರ್ ಅನುಶ್ರೀ, ನಟ ಧನಂಜಯ್ ಸೇರಿದಂತೆ ಹಲವು ನಟರು ಅಪ್ಪು ಭೇಟಿ ಮಾಡಿ ಭೋಜನ ಸವಿದಿದ್ದ ಹೋಟೆಲ್​ಗಳಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...