Wednesday, July 8, 2026
Wednesday, July 8, 2026

ಅನುಕಂಪದ ಆಧಾರಿತ ನೌಕರಿ ವ್ಯಕ್ತಿಯ ಹಕ್ಕಲ್ಲ- ಸುಪ್ರೀಂ ಕೋರ್ಟ್

Date:

ಅನುಕಂಪದ ಸರ್ಕಾರಿ ನೌಕರಿ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅನುಕಂಪದ ಆಧಾರದಲ್ಲಿ ನೀಡುವ ಸರ್ಕಾರಿ ನೌಕರಿಯು ಹಕ್ಕಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅನುಕಂಪದನ ನೌಕರಿ ಒಂದು ರೀತಿಯ ವಿನಾಯ್ತಿಯೇ ವಿನಃ ಅದು ಹಕ್ಕು ಅಲ್ಲ. ಕುಟುಂಬದ ಸದಸ್ಯ ಹಠಾತ್ ನಿಧನರಾದಾಗ ಆದ ಹಾನಿಯಿಂದ ಚೇತರಿಸಿಕೊಳ್ಳಲು ಕುಟುಂಬಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಾತ್ರ ಅನುಕಂಪದ ಉದ್ಯೋಗ ನೀಡಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮಹಿಳೆಯೊಬ್ಬರು ಅನುಕಂಪದ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಿ ಸ್ವಾಮ್ಯದ ರಸಗೊಬ್ಬರ ಹಾಗೂ ರಾಸಾಯನಿಕ ಕಂಪನಿ ಟ್ರಾವಂಕೋರ್ ಲಿ.ಗೆ ಕೇರಳ ಹೈಕೋರ್ಟ್ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಾಗಿತ್ತು.

ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ. ಎ.ಆರ್. ಶಾ ಹಾಗೂ ನ್ಯಾ. ಕೃಷ್ಣ ಮುರಾರಿ ಅವರಿದ್ದ ಪೀಠ, ಟ್ರಾವಂಕೋರ್ ಲಿ. ಉದ್ಯೋಗಿಯಾಗಿದ್ದ ಮಹಿಳೆಯ ತಂದೆ ತೀರಿಕೊಂಡು 2 ದಶಕಗಳೇ ಕಳೆದಿವೆ. ಹೀಗಾಗಿ ಅರ್ಜಿದಾರ ಮಹಿಳೆ ಅನುಕಂಪದ ನೌಕರಿ ಪಡೆಯಲು ಅರ್ಹಳಲ್ಲ ಎಂದು ಹೇಳಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...

B.Y. Raghavendra ಮನೆ ಬಾಗಿಲಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನುನೀಡಿ- ಬಿ.ವೈ.ರಾಘವೇಂದ್ರ

B.Y. Raghavendra ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ...