ಇನ್ನೇನು ಪಿಯುಸಿ ಮುಗಿತು ಎಂದ ತಕ್ಷಣ ವಿದ್ಯಾರ್ಥಿಗಳಿಗೆ ಮುಂದೇನು? ಎಂಬ ಪ್ರಶ್ನೆ ಬರುವುದು ಸಹಜ. ಅದರಲ್ಲೂ ಪಿಯುಸಿ ಅಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಅನೇಕ ಕ್ಷೇತ್ರಗಳು ಕೈಬೀಸಿ ಕರೆಯುತ್ತವೆ ಎಂದರೆ ತಪ್ಪಾಗಲಾರದು.
ಅದರಲ್ಲೂ ವೈದ್ಯಕೀಯ ವಿಭಾಗವನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳು ಮುಂದೆ ವೈದ್ಯರಾಗಿ ಜನರ ಸೇವೆ ಮಾಡಬೇಕೆಂಬ ಹಂಬಲ ಹೊಂದಿರುತ್ತಾರೆ. ವೈದ್ಯಕೀಯ ಪದವಿಯನ್ನು ಪಡೆದ ನಂತರ, ಅವರು ವಿವಿಧ ಪರಿಣಿತ ಕ್ಷೇತ್ರಗಳನ್ನು ಆಯ್ಕೆ ಮಾಡಬಹುದು. ಅದರಲ್ಲಿ ಪ್ರಮುಖವಾಗಿ ಶಿಶುವೈದ್ಯರು, ಸ್ತ್ರೀರೋಗತಜ್ಞರು, ಇಎನ್ಟಿ ತಜ್ಞರು, ಅಂತಃಸ್ರಾವಶಾಸ್ತ್ರಜ್ಞರು, ಮಧುಮೇಹ ತಜ್ಞರು, ಮೂಳೆಚಿಕಿತ್ಸಕರು ಮತ್ತು ಹೃದ್ರೋಗ ತಜ್ಞರಾಗಿ ತಮಗೆ ಇಷ್ಟ ಇರುವ ಪರಿಣಿತ ಕ್ಷೇತ್ರದಲ್ಲಿ ಮುಂದುವರಿಯಬಹುದು.
ಕರ್ನಾಟಕದ ಹಲವು ನಗರಗಳಲ್ಲಿ ವೈದ್ಯಕೀಯ ಕೋರ್ಸ್‌ಗಳು ಇರುವ ಅನೇಕ ವೈದ್ಯಕೀಯ ಕಾಲೇಜುಗಳನ್ನು ನಾವು ಕಾಣಬಹುದು. ಈ ಕಾಲೇಜುಗಳಿಗೆ ಸೇರಬೇಕೆಂದರೆ ಹೆಚ್ಚಿನ ಅಂಕಗಳನ್ನು ಗಳಿಸುವುದರ ಜೊತೆಗೆ, ವಿದ್ಯಾರ್ಥಿಗಳು ನೀಟ್ ಎಂಬ ಕೆಲವು ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
ಹಾಗಿದ್ರೆ ಕೆಲವು ಸಮೀಕ್ಷೆಗಳು, ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ, ನಾವು ಕರ್ನಾಟಕದ ಟಾಪ್ 10 ವೈದ್ಯಕೀಯ ಕಾಲೇಜುಗಳ ಪಟ್ಟಿಯನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ.
1) ಕಸ್ತೂರಬಾ ವೈದ್ಯಕೀಯ ಕಾಲೇಜು, ಮಣಿಪಾಲ( ಸ್ಥಾಪನೆ – 1953)
ಟಿ.ಎಂ.ಎ. ಪೈ ಅವರ ಮಾರ್ಗದರ್ಶನದಲ್ಲಿ 30ನೇ ಜೂನ್ 1953 ರಂದು ಈ ಕಸ್ತೂರಬಾ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಯಿತು. ಕಸ್ತೂರಿ ಬಾ ವೈದ್ಯಕೀಯ ಕಾಲೇಜು ಮಣಿಪಾಲ ವಿಶ್ವವಿದ್ಯಾಲಯದ ಒಂದು ಪ್ರಮುಖ ಘಟಕ ಆಗಿದೆ.
2) ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು, ಬೆಂಗಳೂರು (ಸ್ಥಾಪನೆ – 1979)
ಇದನ್ನು 1979 ರಲ್ಲಿ ಸ್ಥಾಪಿಸಲಾಯಿತು. ರಾಮಯ್ಯ ವೈದ್ಯಕೀಯ ಕಾಲೇಜು ಅನ್ನು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ದೃಷ್ಟಿಯಿಂದ ಸ್ಥಾಪಿಸಲಾಗಿದೆ. ಈ ಕಾಲೇಜು ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ ಮತ್ತು ಇದನ್ನು ಭಾರತೀಯ ವೈದ್ಯಕೀಯ ಮಂಡಳಿ ಗುರುತಿಸಿದೆ.
3) ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಸ್ಥಾಪನೆ – 1955)
BMCRI ಎಂದೂ ಕರೆಯಲ್ಪಡುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು 1955 ರಲ್ಲಿ ಡಾ. ಮೇಖ್ರಿ ಮತ್ತು ಡಾ. ಶಿವರಾಂ ಅವರು ಖಾಸಗಿ ಕಾಲೇಜ್ ಆಗಿ ಸ್ಥಾಪಿಸಿದರು.
4) ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ಬೆಳಗಾವಿ (ಸ್ಥಾಪನೆ – 1963)
ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ಬೆಳಗಾವಿಯು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್‌ನ ಪ್ರಮುಖ ಘಟಕವಾಗಿದ್ದು, ಇದನ್ನು 1963 ರಲ್ಲಿ ಸ್ಥಾಪಿಸಲಾಯಿತು. ಈ ಕಾಲೇಜನ್ನು ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.
5) ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (ಸ್ಥಾಪನೆ – 1980)
ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಯನ್ನು ಬೆಂಗಳೂರು ಒಕ್ಕಲಿಗರ ಸಂಘದಿಂದ 1980 ರಲ್ಲಿ ಸ್ಥಾಪಿಸಲಾಯಿತು ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಈ ಸಂಸ್ಥೆಯು ಸಂಯೋಜಿತವಾಗಿದೆ ಮತ್ತು ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.
6) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ (ಸ್ಥಾಪನೆ – 1996)
ಜೂನ್ 1, 1996 ರಂದು ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರವು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವನ್ನು ತೆರೆಯಿತು. ಅರ್ಹ ಆಕಾಂಕ್ಷಿಗಳಿ ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಕೋರ್ಸ್‌ಗಳನ್ನು ಒದಗಿಸುವ ಪ್ರಮುಖ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಇದಾಗಿದೆ.
7) ಕಸ್ತೂರಬಾ ವೈದ್ಯಕೀಯ ಕಾಲೇಜು, ಮಂಗಳೂರು (ಸ್ಥಾಪನೆ – 1955)
ಕಸ್ತೂರಬಾ ಮೆಡಿಕಲ್ ಕಾಲೇಜ್, ಮಂಗಳೂರು 1955 ರಲ್ಲಿ ಸ್ಥಾಪಿನೆಗೊಂಡಿದೆ. ಇದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರಮುಖ ಘಟಕ ಸಂಸ್ಥೆಯಾಗಿದೆ. ಈ ಕಾಲೇಜು, 1958 ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.
8) ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ತುಮಕೂರು (ಸ್ಥಾಪನೆ – 2008)
ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜನ್ನು 1988 ರಲ್ಲಿ ಶ್ರೀ ಸಿದ್ಧಾರ್ಥ ಎಜುಕೇಶನಲ್ ಸೊಸೈಟಿ (SSES) ಸ್ಥಾಪಿಸಿತು. ಕಾಲೇಜು ತುಮಕೂರು ನಗರದ ಹೊರವಲಯದಲ್ಲಿದೆ. ಕಾಲೇಜು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ಗೆ ಸಂಯೋಜಿತವಾಗಿದೆ.
9) ಖಾಜಾ ಬಂದಾ ನವಾಜ್ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗುಲ್ಬರ್ಗ (ಸ್ಥಾಪನೆ – 2000)
ಖಾಜಾ ಬಂದಾ ನವಾಜ್ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು 2000 ರಲ್ಲಿ ಖಾಜಾ ಎಜುಕೇಶನ್ ಸೊಸೈಟಿ ಸ್ಥಾಪಿಸಿತು. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸರ್ಕಾರದಿಂದ ಗುರುತಿಸಲ್ಪಟ್ಟಿದೆ.
10) ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ & ಆಸ್ಪತ್ರೆ, ಧಾರವಾಡ (ಸ್ಥಾಪನೆ – 2003)
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ವಿಜ್ಞಾನಗಳ ಕಾಲೇಜು ಎಸ್‌ಡಿಎಂ ಎಜುಕೇಶನಲ್ ಸೊಸೈಟಿಯ ಆಶ್ರಯದಲ್ಲಿ ಸ್ಥಾಪಿಸಲಾದ ಮೊದಲ ಆಧುನಿಕ ವೈದ್ಯಕೀಯ ಕಾಲೇಜು. ಇದು MCI, ನವದೆಹಲಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನವದೆಹಲಿಯಿಂದ ಗುರುತಿಸಲ್ಪಟ್ಟಿದೆ.