Sunday, September 27, 2026
Sunday, September 27, 2026

ಮದ್ಯ ಮಾರಾಟ ನೀತಿ ಸಡಿಲಿಸಿದ ಪಂಜಾಬ್ ಸರ್ಕಾರ

Date:

ಪಂಜಾಬ್‌ನ ಆಮ್‌ ಆದ್ಮಿ ಸರ್ಕಾರವು ನೂತನ ಅಬಕಾರಿ ನೀತಿಗೆ ಬುಧವಾರ ಅನುಮೋದನೆ ನೀಡಿದೆ. ಜು.1ರಿಂದ ಈ ನೀತಿ ಜಾರಿಯಾಗಲಿದ್ದು, ಅದರಿಂದಾಗಿ ರಾಜ್ಯದಲ್ಲಿ ಮದ್ಯದ ದರದಲ್ಲಿ ಶೇ.35-60ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

2021-22ರ ಆರ್ಥಿಕ ವರ್ಷದಲ್ಲಿ ಪಂಜಾಬ್‌ ಅಬಕಾರಿ ಇಲಾಖೆಯಿಂದ 6,158 ಕೋಟಿ ರೂ.ಆದಾಯ ಗಳಿಸಿದೆ. ಈ ಆರ್ಥಿಕ ವರ್ಷದಲ್ಲಿ ಅದನ್ನು ಶೇ.40ರಷ್ಟು ಹೆಚ್ಚಿಸಿ, 9,647.85 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಈವರೆಗೆ ಮದ್ಯ ತಯಾರಕರು, ಸಗಟು ವ್ಯಾಪಾರಿ ಮತ್ತು ಚಿಲ್ಲರೆ ವ್ಯಾಪಾರಿ ನಡುವೆ ಸಾಮಾನ್ಯ ಮಧ್ಯವರ್ತಿಗಳಿದ್ದರು. ಆದರೆ ಹೊಸ ನೀತಿಯಿಂದಾಗಿ ಎಲ್ಲ ವಿಭಾಗಗಳು ಪ್ರತ್ಯೇಕವಾಗಿ ಕೆಲಸ ಮಾಡಲಿವೆ, ಮಧ್ಯವರ್ತಿಗಳು ಇರುವುದಿಲ್ಲ. ಹಾಗೆಯೇ, ಬಿಯರ್‌ ಮತ್ತು ಭಾರತದಲ್ಲಿ ತಯಾರಿಸಲಾಗುವ ವಿದೇಶಿ ಮದ್ಯದ ಮಾರಾಟಕ್ಕೆ ಇದ್ದ ಮಿತಿಯನ್ನೂ ತೆಗೆದುಹಾಕಲಾಗಿದೆ.

ಪಂಜಾಬ್‌ನ ಪಕ್ಕದಲ್ಲಿರುವ ಕೇಂದ್ರಾಡಳಿತ ಪ್ರದೇಶಗಳಾದ ಹರ್ಯಾಣ ಮತ್ತು ಚಂಡೀಗಢಕ್ಕೆ ಹೋಲಿಸಿದರೆ ಪಂಜಾಬ್‌ನಲ್ಲಿ ಮದ್ಯದ ಬೆಲೆ ಹೆಚ್ಚಿದೆ. ಅದರಿಂದಾಗಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಕಳ್ಳಸಾಗಣೆಯಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ನೀತಿ ಪರಿಚಯಿಸುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...