Wednesday, December 17, 2025
Wednesday, December 17, 2025

ಅಮೆರಿಕ ವಿರುದ್ಧ ಚೀನಾದಿಂದ ಯರೋಪಿಯನ್ ದೇಶಗಳಿಗೆ ಶಸ್ತ್ರಾಸ್ತ್ರ ಸರಬರಾಜು

Date:

ಕಳೆದ ಏಪ್ರಿಲ್‌ ತಿಂಗಳಲ್ಲಿ ಯುರೋಪಿನ ಸರ್ಬಿಯಾ ರಾಷ್ಟ್ರ ತನ್ನ ಒಂದು ವಾಯುನೆಲೆಯಲ್ಲಿ ‘ಶೀಲ್ಡ್‌ 2022’ ಹೆಸರಿನ ರಕ್ಷಣಾ ವ್ಯವಸ್ಥೆಯ ಪ್ರದರ್ಶನವನ್ನು ಏರ್ಪಡಿಸಿತ್ತು.

ಆ ಸಮಾರಂಭದಲ್ಲಿ ಸರ್ಬಿಯಾದ ನಾಯಕರು ಭಾಗವಹಿಸಿದ್ದು, ದೇಶದ ಸಾವಿರಾರು ನಾಗರಿಕರೂ ಭಾಗವಹಿಸಿ ಅಲ್ಲಿ ಪ್ರದರ್ಶಿಸಿದ್ದ ಸಮರ ಆಯುಧ, ಉಪಕರಣಗಳನ್ನು ವೀಕ್ಷಸಲು ಅನುಮತಿ ನೀಡಲಾಗಿತ್ತು

ಬೆಲ್‌ಗ್ರಾಡ್‌ ಈಗ ಯುರೋಪಿಯನ್‌ ಒಕ್ಕೂಟದಿಂದ ನಿರಾಶೆಗೊಂಡು, ಬೀಜಿಂಗ್‌ ಹಾಗೂ ಮಾಸ್ಕೋ ಜೊತೆಗಿನ ದೀರ್ಘ ಸಮಯದ ಒಡನಾಟವನ್ನು ಹೆಚ್ಚಿಸುತ್ತಿರುವ ಈ ಸಂದರ್ಭದಲ್ಲಿ, ತೆರೆದ ಬಯಲಿನಲ್ಲಿ ಅತ್ಯಂತ ಜಾಗರೂಕವಾಗಿ ನಡೆದ ಸರ್ಬಿಯಾದ ಈ ಪ್ರದರ್ಶನ ಆ ರಾಷ್ಟ್ರದ ಸೈನ್ಯದ ಸಾಮರ್ಥ್ಯವನ್ನು ಅನಾವರಣಗೊಳಿಸಿತ್ತು.

ಶೀಲ್ಡ್‌ 2022ರಲ್ಲಿ ಸರ್ಬಿಯಾಕ್ಕೆ ಚೀನಾ ಮತ್ತು ರಷ್ಯಾ ಜತೆಗಿರುವ ಸಂಬಂಧವನ್ನು ದೃಢೀಕರಿಸಲು ಬೇಕಿದ್ದ ಕುರುಹುಗಳೂ ಇದ್ದವು. ಕನಿಷ್ಠ ಒಂದು ಬ್ಯಾಟರಿ ಚೀನಾ ನಿರ್ಮಿತ ಎಚ್‌ ಕ್ಯೂ – 22 ಎಸ್‌ಎಎಂಗಳು (ನೆಲದಿಂದ ಆಗಸಕ್ಕೆ ದಾಳಿ ಮಾಡುವ ಕ್ಷಿಪಣಿಗಳು) ಹಾಗೂ ರಷ್ಯಾ ನಿರ್ಮಿತ ಪಾಂಟ್ಸಿರ್‌ ಎಸ್‌1ಗಳು ಪ್ರದರ್ಶಿಸಲ್ಪಟ್ಟಿದ್ದವು.

ಚೀನಾದ ಎಚ್‌ ಕ್ಯೂ – 22 ಮೀಡಿಯಂ ರೇಂಜ್‌ ಎಸ್‌ಎಎಂಗಳು (ರಫ್ತಾದ ಸಂದರ್ಭದಲ್ಲಿ ಅದನ್ನು ಎಫ್‌ಕೆ – 3 ಎಂದು ಗುರುತಿಸಲಾಗಿತ್ತು) ಶೀಲ್ಡ್‌ 2022ರಲ್ಲಿ ಏಪ್ರಿಲ್‌ 30ರಂದು ಕಾಣಿಸಿಕೊಂಡದ್ದು ಹಲವು ಕಾರಣಗಳನ್ನು ಪ್ರತಿನಿಧಿಸುತ್ತವೆ. ಇದನ್ನು 1990ರ ದಶಕದ ಕೊನೆಯಲ್ಲಿ ಅನುಭವಿಸಿದ ಕುಸಿತ ಮತ್ತು ದಶಕಗಳ ಕಾಲ ಅನುಭವಿಸಿದ ಮರುಬಂಡವಾಳ ಹೂಡಿಕೆಯ ಕೊರತೆಯ ನಂತರ ಸರ್ಬಿಯಾದ ವಾಯು ರಕ್ಷಣೆಯಲ್ಲಿನ ಅತಿ ದೊಡ್ಡ ಜಿಗಿತ ಎಂದೇ ಪರಿಗಣಿಸಬಹುದು.

ಆ ಕಾರಣದಿಂದ ಬಹುತೇಕ ಕಳೆದ ವರ್ಷದ ತನಕ ಸರ್ಬಿಯಾದ ವಾಯುಪಡೆ ರಷ್ಯಾ ನಿರ್ಮಿತ, ಈಗಾಗಲೇ ಹಳೆಯದಾಗಿದ್ದ ಎಸ್‌ಎಎಂಗಳ ಮೇಲೆ ಅವಲಂಬಿತವಾಗಿತ್ತು. ಚೀನಾ ನಿರ್ಮಿತ ಎಸ್‌ಎಎಂ ಎಚ್‌ಕ್ಯೂ – 9/9ಬಿ/9ಬಿಇ ಜೊತೆ ಹೋಲಿಕೆ ಇದ್ದರೂ, ಎಚ್‌ಕ್ಯೂ – 22ರ ಪಾತ್ರ ಬಹುಪದರಗಳ ವಾಯು ರಕ್ಷಣಾ ಜಾಲದಲ್ಲಿನ ಅಂತರವನ್ನು ಕಡಿಮೆ ಮಾಡುವುದಾಗಿದೆ.

ಪಿಎಲ್‌ಎ ಮೂಲಕ ನಿರ್ವಹಿಸಲ್ಪಟ್ಟಾಗ, ವಿಮಾನ ವಿರೋಧಿ ದಾಳಿಯಲ್ಲಿ ಎಚ್‌ಕ್ಯೂ – 7 ಹಾಗೂ ಎಚ್‌ಕ್ಯೂ – 17/17ಎಇಗಳು ಕನಿಷ್ಠ ದೂರದ್ದಾದರೆ, ಎಚ್‌ಕ್ಯೂ – 16 ಹಾಗೂ ಎಚ್‌ಕ್ಯೂ – 22 ಮಿಡ್‌ ರೇಂಜ್‌ ವ್ಯವಸ್ಥೆಗಳಾಗಿದ್ದು, ಕ್ರೂಸ್‌ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಬಲ್ಲವು.

ಕೊನೆಯದಾಗಿ ಎಚ್‌ಕ್ಯು – 9 ಹಾಗೂ ರಷ್ಯಾ ಪೂರೈಸಿರುವ ಎಸ್‌ – 400 ಗಳು, ಒಳಬರುವ ಶತ್ರು ವಿಮಾನಗಳು, ಬಾಂಬರ್‌ಗಳು, ಅತ್ಯಂತ ಎತ್ತರದಲ್ಲಿ ಹಾರುವ ಡ್ರೋನ್‌ಗಳು ಹಾಗೂ ದಾಳಿ ಎಸಗುವ ಯುದ್ಧ ವಿಮಾನಗಳನ್ನು ಗುರುತಿಸಿ, ದಾಳಿ ನಡೆಸುವ ನಡೆಸಬಲ್ಲವಾಗಿವೆ.

ಈ ವಿವರಣೆ ಚೀನಾದ ಸೈನ್ಯವು ತನ್ನ ವಾಯುರಕ್ಷಣೆಯನ್ನು ಬಹುತೇಕ ಹೇಗೆ ರೂಪಿಸುತ್ತದೆ ಎಂಬ ಅಂದಾಜು ಒದಗಿಸುತ್ತದೆ.

ಇತ್ತೀಚೆಗೆ ಚೀನಾ ನಡೆಸುತ್ತಿರುವ ಶಸ್ತ್ರಾಸ್ತ್ರಗಳ ವ್ಯಾಪಾರ ಕಡಿಮೆ ಸೂಕ್ಷ್ಮತೆಯಿಂದ ಕೂಡಿದೆ. 2020ರಲ್ಲಿ ಸರ್ಬಿಯಾಗೆ ಸಣ್ಣ ಪ್ರಮಾಣದಲ್ಲಿ ಸಿಎಚ್‌ – 92 ಯುದ್ಧ ಡ್ರೋನ್‌ಗಳು ಹಾಗೂ ಲೇಸರ್‌ ನಿರ್ದೇಶಿತ ಶಸ್ತ್ರಗಳ ಪೂರೈಕೆಯಾಗಿತ್ತು. ಸರ್ಬಿಯಾಗೆ ಮುಂದಿನ ದಿನಗಳಲ್ಲಿ ದೊಡ್ಡದಾದ, ಮಧ್ಯಮ ಎತ್ತರದ ಕಾಂಬ್ಯಾಟ್ ಡ್ರೋನ್‌ಗಳು‌ ಬರಲಿವೆ ಎಂಬ ಸುದ್ದಿಗಳು ಸತತವಾಗಿ ಹರಿದಾಡುತ್ತಿವೆ.

ಈಗ ಸರ್ಬಿಯಾದ ಬಳಿ ಇರುವ ಕನಿಷ್ಠ ಒಂದು ಬ್ಯಾಟರಿ ಎಚ್‌ಕ್ಯೂ – 22 ಹಾಗೂ ಇನ್ನೂ ಲಭ್ಯವಾಗಲಿರುವ ಆಯುಧಗಳು ಸರ್ಬಿಯಾದ ಅದರ ವಾಯುಪಡೆಯನ್ನು, ಭೂಸೇನಾ ಪಡೆಯೊಂದಿಗೆ ಕೇವಲ ಗಡಿ ರಕ್ಷಣಾ ಹಂತವನ್ನು ಮೀರಿ ಬೆಳೆಯುವಂತೆ ಮಾಡಲು ಶಕ್ತವಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಚೀನಾ ತನ್ನ ಸರ್ಕಾರಿ ಸ್ವಾಮ್ಯದ ರಕ್ಷಣಾ ಕೈಗಾರಿಕೆಗಳ ಮೂಲಕ, ಹಣದ ಕೊರತೆ ಎದುರಿಸುತ್ತಿರುವ, ಆಧುನೀಕರಣಕ್ಕೆ ಹೆಣಗಾಡುತ್ತಿರುವ ಸೈನ್ಯಗಳನ್ನು ಅಭಿವೃದ್ಧಿಪಡಿಸಬಹುದು ಎಂಬುದನ್ನು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...