ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ಕುರಿತಾಗಿ ಮಾಜಿ ಬ್ರಿಟಿಷ್ ಗುಪ್ತಚರರೊಬ್ಬರು ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಡೊನಾಲ್ಡ್ ಟ್ರಂಪ್ ಕುರಿತು ಬರೆದಿದ್ದ ಹಾಗೂ 2016ರ ಅಮೆರಿಕದ ಚುನಾವಣಾ ಪ್ರಚಾರದಲ್ಲಿ ರಷ್ಯಾದ ಹಸ್ತಕ್ಷೇಪವಿತ್ತು ಎಂದು ಆರೋಪಿಸಿದ್ದ ಕ್ರಿಸ್ಟೋಫರ್ ಸ್ಟೀಲ್, ರಷ್ಯಾ ಮತ್ತು ಇತರೆಡೆಯ ಮೂಲಗಳಿಂದ ಪುಟಿನ್ ಅನಾರೋಗ್ಯದ ಸಂಗತಿಗಳು ನಿಜವಾಗಿವೆ.
ಉಕ್ರೇನ್ ಯುದ್ಧಾರಂಭದ ನಂತರ ರಷ್ಯಾಧ್ಯಕ್ಷರ ಅನಾರೋಗ್ಯದ ಕುರಿತಾಗಿ ಹಲವು ಊಹಾಪೋಹಗಳು ಹರಡುತ್ತಿವೆ.
ಅವರು ತೀವ್ರ ಸ್ವರೂಪದ ಖಾಯಿಲೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಪುಟಿನ್ ಅವರನ್ನು ಕಾಡುತ್ತಿರುವ ಅನಾರೋಗ್ಯವು ನಿಖರವಾಗಿ ಏನೆಂದು ಗೊತ್ತಾಗಿಲ್ಲ. ಆದರೆ ಇದು ಗುಣಪಡಿಸಲಾಗದ ಅಥವಾ ಟರ್ಮಿನಲ್ ಯಾವುದಾದರೂ ಆಗಿರಬಹುದು ಎನ್ನಲಾಗುತ್ತಿದೆ. ಇನ್ನೊಂದೆಡೆ, ಪುಟಿನ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂದು ರಷ್ಯಾದ ನಾಯಕನೊಂದಿಗೆ ನಿಕಟ ಸಂಬಂಧ ಹೊಂದಿರುವ ಹೆಸರಿಸದ ಸರ್ಕಾರದ ಪ್ರತಿನಿಧಿಯೊಬ್ಬರು ಹೇಳಿರುವುದನ್ನು ಅಮೆರಿಕದ ನಿಯತಕಾಲಿಕೆ ವರದಿ ಮಾಡಿದೆ.
ಕಳೆದ ವಾರ ರಷ್ಯಾ ವಿಜಯ ದಿನಾಚರಣೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಪುಟಿನ್ ನಿಶಕ್ತರಾಗಿರುವಂತೆ ಕಂಡುಬಂದಿದ್ದರು. ಈ ಕುರಿತ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.