Wednesday, March 4, 2026
Wednesday, March 4, 2026

ಪಕ್ಷಾಂತರ ಸುಳಿವು ನೀಡದ ದತ್ತರ ಚಿತ್ತ?

Date:

ಜೆಡಿಎಸ್ ಪಕ್ಷ ಹಮ್ಮಿಗೊಂಡಿರುವ ಜನತಾ ಜಲಧಾರೆ ಸೇರಿದಂತೆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರ ವೈ.ಎಸ್.ವಿ.ದತ್ತಾ ಸುಳಿದಿಲ್ಲ. ಆದ್ದರಿಂದ ಪಕ್ಷ ಬಿಡುವ ಚಿಂತನೆಯಲ್ಲಿ ದತ್ತಾ ಇದ್ದಾರಾ ಎನ್ನುವ ಚರ್ಚೆ ಈಗ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.

ದತ್ತಾ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಕೂಡ ಇದೆ. ಇದೆಲ್ಲದಕ್ಕೂ ವೈ.ಎಸ್.ವಿ.ದತ್ತಾ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ನಾನು ಜೆಡಿಎಸ್‌ನಲ್ಲಿ ಇರುತ್ತೇನೆ ಎಂದು ಹೇಳುವುದಕ್ಕೂ ಕಾಲ ಬರಬೇಕು. ಮಾತ್ರವಲ್ಲದೇ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುವುದಕ್ಕೂ ಸಮಯ ಬರಬೇಕೆಂದು ಚಿಕ್ಕಮಗಳೂರಿನಲ್ಲಿ ದತ್ತಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ ಮಾತಾನಾಡಿ ಕಾಲ ಬಂದಾಗ ನನ್ನ ನಿರ್ಧಾರ ಹೇಳುತ್ತೇನೆ. ಎಲ್ಲದಕ್ಕೂ ಸಮಯ ಬರಬೇಕೆಂದರು. ಜೆಡಿಎಸ್ ತೊರೆಯುವ ಕುರಿತು ಮಾಧ್ಯಮದವರ ಪ್ರಶ್ನೆಯನ್ನು ನಯವಾಗಿ ತಿರಸ್ಕರಿಸಿದ ವೈ.ಎಸ್.ವಿ.ದತ್ತಾ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಬದಲಾಗುವುದೆಂದರೆ… ಮ್ಯಾಜಿಕ್ ಅಲ್ಲ

ಲೇ; ಎಸ್.ಪಿ.ಶ್ವೇತಾ.ಶೃಂಗೇರಿ. Klive Special Article ಬದಲಾವಣೆ ಜಗತ್ತಿನ ನಿಯಮ.ಹುಟ್ಟಿದ ಕ್ಷಣದಿಂದ...

MESCOM ಸಾಗರ; ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ. 04 ರಂದು...

S.N. Channabasappa ಇಂದಿರಾ ಹಾಗೂ ಅಪೂರ್ವ ಬಡಾವಣೆಗಳ ರಸ್ತೆ ಕಾಮಗಾರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ

S.N. Channabasappa ಶಿವಮೊಗ್ಗ ನಗರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ನಿಟ್ಟಿನಲ್ಲಿ...

S. N. Channabasappa ಸಂಸ್ಕೃತಿ ಎಂಬುದು ಒಂದು ನಡವಳಿಕೆ : ಎಸ್ ಎನ್. ಚನ್ನಬಸಪ್ಪ

S. N. Channabasappa ಹಿಂದೂ ಮತ್ತು ಸಂಸ್ಕೃತಿ ಎಂಬುದು ಬೇರೆಯಲ್ಲ. ಸಂಸ್ಕೃತಿ...