Friday, October 16, 2026
Friday, October 16, 2026

ರಷ್ಯದ ಆರ್ಥಿಕತೆ ಬಿಗಡಾಯಿಸುತ್ತಿದೆ

Date:

ಉಕ್ರೇನ್‌ ನ ಲುವ್ಯೂನಲ್ಲಿ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಗೆ ಏಳು ನಾಗರಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎಂಟು ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ನಾಗರಿಕರು ವಾಸ್ತವ್ಯ ಹೂಡಿರುವ ಕಟ್ಟಡಗಳ ಮೇಲೆ ನಡೆಸಲಾದ ದಾಳಿಗಳಲ್ಲಿ ಗಾಯಗೊಂಡವರಲ್ಲಿ ಪುಟ್ಟ ಮಗುವೊಂದು ಸೇರಿದ್ದು ಅವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ರಷ್ಯಾ ಪಡೆಗಳಿಂದ ಉಕ್ರೇನ್‌ ಸೇನೆಗೆ ಸಂಬಂಧಿಸಿದ ಮೂರು ಕಟ್ಟಡಗಳು, ಉಕ್ರೇನ್‌ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ್ದ ಸ್ಥಳೀಯ ಹೊಟೇಲ್‌ನ ಮೇಲೂ ದಾಳಿ ನಡೆಸಲಾಗಿದೆ.

ಉಕ್ರೇನ್‌ನ ಮರುನಿರ್ಮಾಣಕ್ಕಾಗಿ ಹಾಗೂ ಅಲ್ಲಿನ ಜನರಿಗೆ ಮೂಲಸೌಕರ್ಯ ಗಳನ್ನು ಕಲ್ಪಿಸಲಿಕ್ಕಾಗಿ ವಿಶ್ವಸಂಸ್ಥೆಯ “ಮಲ್ಟಿ ಡೋನರ್‌ ನಿಧಿ’ಯಿಂದ ಉಕ್ರೇನ್‌ಗೆ ದೇಣಿಗೆ ನೀಡುವ ಸಂಬಂಧ ಶೀಘ್ರವೇ ಘೋಷಣೆ ಮಾಡಲಾಗುತ್ತದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಐರೋಪ್ಯ ರಾಷ್ಟ್ರಗಳು, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಹೇರಿರುವ ಆರ್ಥಿಕ ದಿಗ್ಬಂಧನದಿಂದಾಗಿ ರಷ್ಯಾವು 1994ರ ಅನಂತರ ಕಂಡ ತೀವ್ರ ತೆರನಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಖುದ್ದು ರಷ್ಯಾವೇ ಹೇಳಿದೆ. ಖರ್ಚು ವೆಚ್ಚ ಹೊಂದಾಣಿಕೆಗಾಗಿ ಬ್ಯಾಂಕುಗಳ ಠೇವಣಿ ಮೇಲಿನ ಬಡ್ಡಿ ದರ ಇಳಿಸುವುದಾಗಿ ಹೇಳಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...