Friday, October 16, 2026
Friday, October 16, 2026

ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಪಾಂಡೆ ನೇಮಕ

Date:

ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆಯವರು ನೇಮಕಗೊಂಡಿದ್ದಾರೆ.

ನ್ಯಾಶನಲ್ ಡಿಫೆನ್ಸ್​ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದ ಇವರು 1982ರ ಡಿಸೆಂಬರ್​​ನಲ್ಲಿ ಕಾರ್ಪ್ಸ್​ ಆಫ್​ ಇಂಜಿನಿಯರ್ಸ್​ಗೆ ಸೇರ್ಪಡೆಗೊಂಡರು.

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಇರುವ ಪಲ್ಲಾನ್​ವಾಲಾ ವಲಯದಲ್ಲಿ ಆಪರೇಶನ್​ ಪರಾಕ್ರಮ ನಡೆಸುವಾಗ ಇವರು ಇಂಜಿನಿಯರ್ ರೆಜಿಮೆಂಟ್​ನ್ನು ಮುನ್ನಡೆಸಿದ್ದರು.

ಈಗಿರುವ ಜನರಲ್​ ಮನೋಜ್​ ಮುಕುಂದ್ ನರವಾನೆಯವರ 28 ತಿಂಗಳ ಅಧಿಕಾರ ಅವಧಿ ಏಪ್ರಿಲ್ 30ಕ್ಕೆ ಅಂತ್ಯಗೊಳ್ಳಲಿರುವ ಈ ಹಿನ್ನೆಲೆಯಲ್ಲಿ ಮನೋಜ್ ಪಾಂಡೆಯವರನ್ನ ನೇಮಕಮಾಡಲಾಗಿದೆ.

ಇವರು ಭಾರತೀಯ ಸೇನೆಯ 29ನೇ ಮುಖ್ಯಸ್ಥರಾಗಿದ್ದಾರೆ. ಇದೀಗ ಮನೋಜನ್​ ಪಾಂಡೆ ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದನ್ನು ಭಾರತೀಯ ರಕ್ಷಣಾ ಇಲಾಖೆ ಘೋಷಣೆ ಮಾಡಿದೆ.

ಇದರೊಂದಿಗೆ ಮನೋಜ್​ ಪಾಂಡೆಯವರು ಕಾರ್ಪ್​ ಆಫ್​ ಇಂಜಿನಿಯರ್​ ವಿಭಾಗದಿಂದ ಸೇನಾ ಮುಖ್ಯಸ್ಥರಾದ ಮೊದಲ ಅಧಿಕಾರಿ ಎನ್ನುವುದು ಗಮನಾರ್ಹ.

ಆಪರೇಶನ್​ ಪರಾಕ್ರಮ ಎಂಬುದು 2002ರ ಹೊತ್ತಿಗೆ ನಡೆದ ಒಂದು ಕಾರ್ಯಾಚರಣೆ. 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸೃಷ್ಟಿಯಾಗುವ ಸನ್ನಿವೇಶವನ್ನು ತಂದಿತ್ತು. ಆ ವೇಳೆ ಪಶ್ಚಿಮದ ಗಡಿಗೆ ಭಾರತೀಯ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಾಗಿಸಿತ್ತು.

ಮನೋಜ್​ ಪಾಂಡೆ ತಮ್ಮ 39 ವರ್ಷಗಳ ಸೇನಾ ವೃತ್ತಿಯಲ್ಲಿ ಪಶ್ಚಿಮದ ಗಡಿಯ ಇಂಜಿನಿಯರ್​ ಬ್ರಿಗೇಡ್​, ಎಲ್​ಒಸಿ ಬಳಿ ಪದಾತಿ ದಳ, ಲಡಾಖ್​ ವಲಯದಲ್ಲಿ ಪರ್ವತ ವಿಭಾಗದ ದಳ ಮತ್ತು ಈಶಾನ್ಯದ ಗಡಿಯಲ್ಲೂ ಒಂದು ಕಾರ್ಪ್ಸ್​​ನ್ನು ಮುನ್ನಡೆಸಿದ್ದಾರೆ.

ಹಾಗೇ, ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನೂ ಅಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಕಾರ್ಪ್ಸ್​ ಆಫ್​ ಇಂಜಿನಿಯರ್​​ ರೆಜಿಮೆಂಟ್​ನ್ನು ಮನೋಜ್ ಪಾಂಡೆ ಮುನ್ನಡೆಸಿದ್ದರು.

ಪೂರ್ವ ಕಮಾಂಡ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...