Wednesday, October 2, 2024
Wednesday, October 2, 2024

ಪರಂಪರೆಯು ನಾವು ವಾಸಿಸುವ ವರ್ತಮಾನಕ್ಕೆ ಶ್ರೀರಕ್ಷೆ

Date:

ಸಂಸ್ಕೃತಿ ಮತ್ತು ಪರಂಪರೆ ಮಾನವ ಸಮಾಜವನ್ನು ರೂಪಿಸುತ್ತದೆ.ಒಂದು ರಾಷ್ಟ್ರದ ಸಮುದಾಯದ ಗುರುತು ಅದರ ಐತಿಹಾಸಿಕ ಮತ್ತು ಸಾಂಸ್ಕøತಿಕ ಪರಂಪರೆಯಲ್ಲಿದೆ.

ಪರಂಪರೆಯು ನಾವು ವಾಸಿಸುವ ವರ್ತಮಾನದ ಅತ್ಯಗತ್ಯ ಭಾಗವಾಗಿರುವುದರ ಜೊತೆಗೆ ನಾವು ನಿರ್ಮಿಸುವ ಭವಿಷ್ಯಕ್ಕೆ ದಾರಿಯಾಗಿದೆ ಹಾಗೂ ನಾವು ಇಂದು ಹೇಗೆ ಬದುಕುತ್ತಿದ್ದೇವೆ ಮತ್ತು ಭವಿಷ್ಯದ ಪೀಳಿಗೆಗೆ ನಾವು ಏನನ್ನು ನೀಡುತ್ತೇವೆ ಎಂಬುದನ್ನು ವಿವರಿಸುತ್ತದೆ.

ನಮ್ಮ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪ್ರಾಚೀನ ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸಲು ಅಗತ್ಯವಿರುವ ಪ್ರಯತ್ನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾನವ ಜನಾಂಗ ಮತ್ತು ಸಂಸ್ಕೃತಿ ಸಂಪೂರ್ಣವಾಗಿ ಮೀಸಲಾಗಿರಿಸಿ ಜಾಗತಿಕವಾಗಿ ಪ್ರತಿವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆ ದಿನವಾಗಿ ಇಂಟರ್ ನ್ಯಾಷನಲ್ ಕೌನ್ಸಿಲ್ ಆನ್ ಮಾನ್ಯೂಮೆಂಟ್ಸ್ ಅಂಡ್ ಸೈಟ್ಸ್( ಐ.ಸಿ.ಒ.ಎಮ್.ಒ.ಎಸ್) ನಿಂದ ಆಚರಿಸಲಾಗುತ್ತದೆ.

ಪ್ರಸ್ತುತ ವರ್ಷದ ವಿಶ್ವ ಪಾರಂಪರಿಕ ದಿನವನ್ನು “ಪರಂಪರೆ ಮತ್ತು ಹವಾಮಾನ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶ್ವ ಪರಂಪರೆಯ ಗುಣಲಕ್ಷಣಗಳು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳ ಸಮಸ್ಯೆಗಳನ್ನು ಮನಗಂಡ ಹಲವಾರು ಅಂತರ ರಾಷ್ಟ್ರೀಯ ಸಂಸ್ಥೆಗಳು 2005ರಲ್ಲಿ ವಿಶ್ವ ಪರಂಪರೆ ಸಮಿತಿ ಗಮನಕ್ಕೆ ತರಲಾಯಿತು. ಇದನ್ನು ಪರಿಗಣಿಸಿ ಯುನೆಸ್ಕೋ ವಿಶ್ವ ಪರಂಪರೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅನ್ವೇಷಿಸಲು ಮತ್ತು ನಿರ್ವಹಿಸಲು ಕಾರ್ಯಾರಂಭ ಮಾಡಿದೆ.

ಎರಡನೇ ಮಹಾ ಯುದ್ಧದ ನಂತರ ಉದ್ಭವಿಸಿದ ವಿಶ್ವ ಪರಂಪರೆ ಪರಿಕಲ್ಪನೆಯು, 1959 ರಲ್ಲಿ ಈಜಿಪ್ಟ್‍ನ ಅಸ್ವಾನ್ ಅಣೆಕಟ್ಟಿನ ನಿರ್ಮಾಣದಿಂದ ವಿಶ್ವದ ಅತ್ಯಂತ ವಿಶಿಷ್ಟವಾದ ಸಾಂಸ್ಕೃತಿಕ ಸ್ಮಾರಕಗಳಲ್ಲಿ ಒಂದಾದ ” ಅಬು ಸಿಂಬೆಲ್‍ನಲ್ಲಿರುವ ರಾಮ್‍ಸೆಸ್ ||” ದೇವಾಲಯವು ವಿನಾಶದ ಬೆದರಿಕೆಗೆ ಒಳಗಾದಾಗ ಅದರ ಮರು ನಿರ್ಮಾಣದಿಂದ ಪ್ರಾರಂಭವಾಯಿತು.

ಪ್ರಪಂಚದ ಪ್ರಮುಖ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ತಾಣಗಳನ್ನು ರಕ್ಷಿಸುವ ಸಲುವಾಗಿ ಜಾಗತಿಕ ಸಮಾವೇಶದ ಅಗತ್ಯತೆಯಿದ್ದ ಸಂದರ್ಭದಲ್ಲಿ 1972 ನವೆಂಬರ್ 16 ರಂದು ಇಡೀ ಮಾನವ ಕುಲಕ್ಕೆ ಸೇರಿದ ಅತ್ಯುತ್ತಮ ಸಾರ್ವತ್ರಿಕ ಮೌಲ್ಯದ ಸ್ಥಳಗಳನ್ನು ರಕ್ಷಿಸುವ ಉದ್ದೇಶದಿಂದ ಪ್ರಪಂಚದ ನೈಸರ್ಗಿಕ ಮತ್ತು ಸಾಂಸ್ಕøತಿಕ ಪರಂಪರೆಯ ಬಗ್ಗೆ ಒಂದು ಸಮಾವೇಶವನ್ನು ಯುನೆಸ್ಕೋ ಅಂಗೀಕರಿಸಿತು. ಇದರ ಫಲವಾಗಿ 1975ರಲ್ಲಿ ಜಾರಿಗೆ ಬಂದ ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ರಕ್ಷಣೆಯು ಸಶಸ್ತ್ರ ಸಂಘರ್ಷಗಳಿಂದ, ಆರ್ಥಿಕ ಒತ್ತಡಗಳಿಂದ, ನೈಸರ್ಗಿಕ ವಿಕೋಪಗಳಿಂದ ಮತ್ತು ಹವಮಾನ ಬದಲಾವಣೆಗಳಂತಹ ಬೆದರಿಕೆಗಳಿಂದ ರಕ್ಷಿಸಲು ಸಂಘಟಿತವಾಗಿದೆ.
ವಿಶ್ವ ಪರಂಪರೆಯ ತಾಣಗಳು ವಿಶಿಷ್ಟವಾದ ಸಾಂಸ್ಕøತಿಕ ಅಥವಾ ಭೌತಿಕ ಪ್ರಾಮುಖ್ಯತೆಯ ಸ್ಥಳಗಳಾಗಿವೆ. ಇವುಗಳನ್ನು ಮಾನವೀಯತೆಯ ಮಹೋನ್ನತ ಮೌಲ್ಯಗಳೆಂದು ಪರಿಗಣಿಸಲಾಗಿದೆ. ಭೂಮಿಯ ಮೇಲಿನ ಅದ್ಭುತ ಕಟ್ಟಡಗಳು, ನಗರಗಳು, ಮರುಭೂಮಿ, ಕಾಡು, ದ್ವೀಪ, ಸರೋವರಗಳು ಮತ್ತು ಸ್ಮಾರಕಗಳು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರುತ್ತವೆ.

ಪ್ರತಿಯೊಂದು ದೇಶವು ತನ್ನದೇ ಆದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸ್ಮಾರಕಗಳನ್ನು ಹೊಂದಿದ್ದು, ಅವು ದೇಶದ ಇತಿಹಾಸವನ್ನು ಚಿತ್ರಿಸುವುದರ ಜೊತೆಗೆ ಸಂಸ್ಕೃತಿಯನ್ನು ರೂಪಿಸಲು ಬಹಳಷ್ಟು ಕೊಡುಗೆ ನೀಡುತ್ತದೆ.

ಇಂದು ವಿಶ್ವದಲ್ಲಿ ಹಲವಾರು ಪಾರಂಪರಿಕ ತಾಣಗಳು ಮಾನವನ ಹಲವು ಚಟುವಟಿಕೆಗಳಿಂದ ಹಾನಿಗೊಳಗಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಕೃಷಿಯ ವಿಸ್ತರಣೆ, ಗಣಿಗಾರಿಕೆ, ಕಾನೂನು ಬಾಹಿರ ಚಟುವಟಿಕೆಗಳು, ಯುದ್ಧ, ನಾಗರಿಕ ಅಶಾಂತಿ ಮತ್ತು ಮಿಲಿಟರಿ ವ್ಯಾಯಾಮಗಳು ಮತ್ತು ಹವಾಮಾನ ಬದಲಾವಣೆ. ಉದಾಹರಣೆಗೆ ಉಕ್ರೇನ್ ದೇಶ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ಅಲ್ಲಿನ ಏಳು ವಿಶ್ವ ಪಾರಂಪರಿಕ ತಾಣಗಳು ಇಂದು ರಷ್ಯಾದ ಆಕ್ರಮಣದಿಂದಾಗಿ ಅಪಾಯದ ಅಂಚಿನಲ್ಲಿವೆ.

ಪ್ರಪಂಚದ 167 ದೇಶಗಳಲ್ಲಿ ಸುಮಾರು 1154 ವಿಶ್ವ ಪಾರಂಪರಿಕ ತಾಣಗಳಿದ್ದು, ಇವುಗಳಲ್ಲಿ 897 ಸಂಸ್ಕೃತಿಕ 218 ನೈಸರ್ಗಿಕ ಮತ್ತು 39 ಮಿಶ್ರ ಗುಣಲಕ್ಷಣಗಳನ್ನು ಹೊಂದಿರುವ ತಾಣಗಳಾಗಿವೆ. ವಿಶ್ವದ ಅತೀ ಹೆಚ್ಚು ಯುನೆಸ್ಕೋ ಪಾರಂಪರಿಕ ತಾಣಗಳನ್ನು ಹೊಂದಿರುವ ದೇಶಗಳಲ್ಲಿ ಇಟಲಿ ಪ್ರಥಮ ಸ್ಥಾನದಲ್ಲಿದೆ(58). ಭಾರತದಲ್ಲಿ ಪ್ರಸ್ತುತ 40 ವಿಶ್ವ ಪಾರಂಪರಿಕ ತಾಣಗಳಿದ್ದು, ಅವುಗಳಲ್ಲಿ 32 ಸಾಂಸ್ಕೃತಿಕ 7 ನೈಸರ್ಗಿಕ ಮತ್ತು 1 ಮಿಶ್ರ ಗುಣಲಕ್ಷಣಗಳುಳ್ಳದ್ದಾಗಿವೆ.

ಇಂದು ವಿಶ್ವದಲ್ಲಿ ಹಲವಾರು ಪಾರಂಪರಿಕ ತಾಣಗಳು ಅಪಾಯದಲ್ಲಿವೆ. ಉದಾಹರಣೆಗೆ ನೈಸರ್ಗಿಕ ಪಾರಂಪರಿಕ ತಾಣವಾದ ಆಸ್ಟ್ರೇಲಿಯಾದ ‘ಗ್ರೇಟ್ ಬ್ಯಾರಿಯರ್ ರೀಫ್’ ಮಾನವನ ಅನೇಕ ಚಟುವಟಿಕೆಗಳಿಂದ ಅಪಾವನ್ನು ಎದುರಿಸುತ್ತಿದೆ. ಭಾರತದ ಮೂರು ಪ್ರಮುಖ ನೈಸರ್ಗಿ ವಿಶ್ವ ಪರಂಪರೆಯ ತಾಣಗಳು- ಪಶ್ಚಿಮ ಘಟ್ಟಗಳು, ಸುಂದರ್‍ಬನ್ ರಾಷ್ಟ್ರೀಯ ಉದ್ಯಾನವನ ಮತ್ತು ಮಾನಸ್ ವನ್ಯ ಜೀವಿ ಅಭಯಾರಣ್ಯಗಳು ಗಣಿಗಾರಿಕೆಯಂತಹ ಹಾನಿಕಾರಿಕ ಕೈಗಾರಿಕ ಚಟುವಟಿಕೆಗಳಿಂದ ಬೆದರಿಕೆಯನ್ನು ಎದುರಿಸುತ್ತಿವೆ. ಇತ್ತೀಚಿನ ತಂತ್ರಜ್ಞಾನ ಮತ್ತು ಸಂರಕ್ಷಣೆಯ ವಿಧಾನಗಳ ಕೊರತೆ ಹಾಗೂ ಹೆಚುತ್ತಿರುವ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗಳು ಇಂದು ವಿಶ್ವದ ಪಾರಂಪರಿಕ ತಾಣಗಳಿಗೆ ಅಪಾಯವನ್ನೊಡ್ಡಿವೆ.

ವರ್ತಮಾನವನ್ನು ನಿರ್ಮಿಸಲು, ಸಮಾಜದ ಭವಿಷ್ಯವನ್ನು ರೂಪಿಸಲು ಮಾನವ ಜನಾಂಗವು ತನ್ನ ಭೂತ ಕಾಲವನ್ನು ಅವಲಂಬಿಸಿರುವುದರಿಂದ ಅಪಾಯದಂಚಿನಲ್ಲಿರುವ ಪಾರಂಪರಿಕ ತಾಣಗಳನ್ನು ರಕ್ಷಿಸುವುದು ಅಗತ್ಯವಾಗಿದೆ.
ಹವಾಮಾನ ಬದಲಾವಣೆಗಳ ಪರಿಣಾಮಗಿಳಿಂದ ವಿಶ್ವ ಪಾರಂಪರಿಕ ತಾಣಗಳನ್ನು ರಕ್ಷಿಸುವ ಪ್ರಮುಖ ಮಾರ್ಗಗಳೆಂದರೆ- ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಸಮರ್ಥವಾಗಿ ನಿರ್ವಹಿಸುವುದು, ಪಾರಂಪರಿಕ ರಕ್ಷಣ ಕಾನೂನುಗಳು, ಮಾಲಿನ್ಯ ನಿಯಂತ್ರಕ ಕಾನೂನುಗಳು ಮತ್ತು ಪರಿಸರ ರಕ್ಷಣಾ ಕಾನೂನುಗಳನ್ನು ತರುವುದರ ಮೂಲಕ ಪಾರಂಪರಿಕ ತಾಣಗಳ ರಕ್ಷಣೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...