Monday, October 12, 2026
Monday, October 12, 2026

ಉಕ್ರೇನ್ ನಲ್ಲಿ ರಷ್ಯ ನರಮೇಧ ನಡೆಸುತ್ತಿದೆ- ಝೆಲೆನ್ಸ್ಕಿ

Date:

ರಷ್ಯಾ ತನ್ನ ದೇಶದಲ್ಲಿ ನರಮೇಧ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಆರೋಪಿಸಿದ್ದಾರೆ. ರಾಜಧಾನಿ ಕೀವ್‌ನ ಹೊರಗೆ ರಷ್ಯಾದ ಪಡೆಗಳು ಕಾರ್ಯಾಚರಣೆಯನ್ನು ಹಿಂಪಡೆದ ಪಟ್ಟಣಗಳಲ್ಲಿ ನಾಗರಿಕರ ಹತ್ಯೆಯಾಗಿರುವುದು ಗೋಚರಿಸುತ್ತಿದ್ದಂತೆ ಪಾಶ್ಚಿಮಾತ್ಯ ನಾಯಕರು ಖಂಡಿಸಿದ್ದಾರೆ.

ಖಂಡಿತವಾಗಿಯೂ ಇದು ನರಮೇಧ. ಇಡೀ ರಾಷ್ಟ್ರ ಮತ್ತು ಜನರ ನಿರ್ಮೂಲನೆ ಮಾಡುವುದಾಗಿದೆ’. ‘ನಾವು ಉಕ್ರೇನ್‌ನ ಪ್ರಜೆಗಳು ಮತ್ತು ರಷ್ಯಾದ ನೀತಿಗೆ ನಾವು ಅಧೀನರಾಗಲು ಬಯಸುವುದಿಲ್ಲ. ಈ ಕಾರಣದಿಂದಾಗಿ ನಾವು ನಾಶವಾಗುತ್ತಿದ್ದೇವೆ’ ಎಂದು ಝೆಲೆನ್‌ಸ್ಕಿ ಸಿಬಿಎಸ್‌ನ ‘ಫೇಸ್ ದಿ ನೇಷನ್’ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಆದರೆ, ರಷ್ಯಾದ ರಕ್ಷಣಾ ಸಚಿವಾಲಯ ಈ ಆರೋಪಗಳನ್ನು ನಿರಾಕರಿಸಿದೆ. ಬುಕಾದಲ್ಲಿ ಮೃತ ದೇಹಗಳನ್ನು ತೋರಿಸುವ ದೃಶ್ಯಗಳು ಮತ್ತು ಫೋಟೊಗಳು ಕೀವ್‌ನಿಂದ ಆಗುತ್ತಿರುವ ಮತ್ತೊಂದು ಪ್ರಚೋದನೆ ಎಂದು ಹೇಳಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಝೆಲೆನ್‌ಸ್ಕಿ, ಸೂಚನೆಗಳು ಹಾಗೂ ಆದೇಶಗಳನ್ನು ನೀಡಿದ ಎಲ್ಲಾ ಮಿಲಿಟರಿ ಕಮಾಂಡರ್‌ಗಳು ಸೇರಿ ಪ್ರತಿಯೊಬ್ಬರಿಗೂ ಸಮರ್ಪಕ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...