ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ತಮ್ಮನ್ನು ಪದಚ್ಯುತಿಗೊಳಿಸುವ ಪ್ರಯತ್ನವನ್ನು ಇಮ್ರಾನ್ ಖಾನ್ ವಿಫಲಗೊಳಿಸಿದ್ದಾರೆ.
ಪಾಕಿಸ್ತಾನದ ಸಂಸತ್ತು ನ್ಯಾಷನಲ್ ಅಸೆಂಬ್ಲಿಯು ಭಾನುವಾರ ಭಾರಿ ಪ್ರಹಸನಕ್ಕೆ ಸಾಕ್ಷಿಯಾಯಿತು.
ಸಂಸತ್ತು ವಿಸರ್ಜನೆಗೆ ಅಧ್ಯಕ್ಷ ಆರಿಫ್ ಅಲ್ವಿ ಅವರ ಅನುಮೋದನೆಯನ್ನು ಇಮ್ರಾನ್ ಪಡೆದುಕೊಂಡಿದ್ದಾರೆ. ಹೀಗಾಗಿ ಮೂರು ತಿಂಗಳಲ್ಲಿ ಪಾಕಿಸ್ತಾನ ಸಂಸತ್ತಿನ ಚುನಾವಣೆ ನಡೆಯಲಿದೆ.
ಇಮ್ರಾನ್ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಅಸಾಂವಿಧಾನಿಕ ಎಂದು ಅವರು ಹೇಳಿದರು.
ಇದೇ ಹೊತ್ತಿಗೆ ಸುದ್ದಿವಾಹಿನಿಯಲ್ಲಿ ಕಾಣಿಸಿಕೊಂಡ ಇಮ್ರಾನ್ ಖಾನ್, ಪಾಕಿಸ್ತಾನದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವಿದೇಶಿ ಶಕ್ತಿಗಳು ಹಸ್ತಕ್ಷೇಪ ನಡೆಸುತ್ತಿವೆ ಎಂದು ದೂರಿದರು.
ಸಂಸತ್ತನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದೇನೆ. ಚುನಾವಣೆ ನಡೆಯಲಿ. ಏನು ಬೇಕು ಎಂಬುದನ್ನು ದೇಶವು ತೀರ್ಮಾನಿಸಲಿ ಎಂದು ಇಮ್ರಾನ್ ಹೇಳಿದ್ದಾರೆ.
ಪಾಕಿಸ್ತಾನದ ಯಾವ ಪ್ರಧಾನಿಯೂ ಅವಧಿ ಪೂರ್ಣಗೊಳಿಸಿದ ಇತಿಹಾಸ ಇಲ್ಲ. 2018 ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಅವರು ತಮ್ಮ ಆಳ್ವಿಕೆಯ ಅತ್ಯಂತ ದೊಡ್ಡ ಸವಾಲು ಎದುರಿಸುತ್ತಿ ದ್ದಾರೆ.